ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ; ಯಕ್ಷಾಶ್ರಯ ಯೋಜನೆಯಡಿ ಕಲಾವಿದರಿಗೆ ಸಹಾಯಧನ ವಿತರಣೆ

Prakhara News
1 Min Read
Oplus_0

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಸದನ್ ಟ್ರಸ್ಟ್ ನ ಯಕ್ಷಾಶ್ರಯ ಯೋಜನೆಯಡಿ ಅರ್ಹ ಫಲಾನುಭವಿ ತೆಂಕು ಬಡಗಿನ ಕಲಾವಿದರುಗಳಿಗೆ ಸುಮಾರು ರೂಪಾಯಿ 25 ಲಕ್ಷ ಮೊತ್ತದ ಸಹಾಯ ಧನವನ್ನು ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ಬಲ್ಲಾಳ್ ಬಾಗ್ ನಲ್ಲಿರುವ ಪತ್ತ್ ಮುಡಿ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.

ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಕಲಾವಿದರು ಸ್ವಂತ ಮನೆಯನ್ನು ಕಟ್ಟಿ ಸುಖವಾಗಿರಬೇಕೆಂಬುದು ನಮ್ಮ ಆಶಯ. ದಾನಿಗಳಿಂದ ಪಡೆದು ಸಹಾಯಧನವನ್ನು ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಮಹಾದಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ, ಕೋಶಾಧಿಕಾರಿ CA ಸುದೇಶ್ ರೈ ,ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಯಕ್ಷಾಶ್ರಯ ಯೋಜನೆಯ ಪದಾಧಿಕಾರಿ ಡಾ.ಪ್ರಖ್ಯಾತ್ ಶೆಟ್ಟಿ, ಯಕ್ಷಧ್ರುವ ಯಕ್ಷ ಶಿಕ್ಷಣ ಯೋಜನೆಯ ಸಂಚಾಲಕ ವಾಸು ಐತಾಳ ಹಾಗೂ ದೀವಿತ್ ಕೋಟ್ಯಾನ್ ಪೆರಾಡಿಯವರು ಉಪಸ್ಥಿತರಿದ್ದರು.

Share This Article
Leave a Comment