ಮಂಗಳೂರು : ಕೋಸ್ಮೋಪೊಲಿಟನ್ ಕ್ಲಬ್ ವತಿಯಿಂದ ಫೆ 20 ರಿಂದ ಮಾರ್ಚ್ 1 ರ ತನಕ ರಾಜ್ಯ ಮಟ್ಟದ ಆಹ್ವಾನಿತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ಶಿಪ್ 2026 ಸ್ಪರ್ಧೆಯು ನಗರದ ಬಾವುಟಗುಡ್ಡೆಯಲ್ಲಿರುವ ಕೋಸ್ಮೋಪೊಲಿಟನ್ ಕ್ಲಬ್ ಒಳ ಕ್ರೀಡಾಂಗಣದಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲಾ ಮಟ್ಟದಲ್ಲಿ ನಡೆಯಲಿದ್ದು ಈ ಸ್ಪರ್ಧೆಯಲ್ಲಿ ಪ್ರತಿಷ್ಠಿತ 14 ಮಂದಿ ರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ ಎಂದು ಟೂರ್ನಮೆಂಟ್ ಛೇರ್ಮೆನ್ ರಾಜಗೋಪಾಲ ರೈ ತಿಳಿಸಿದರು.


ಅವರು ನಗರದ ಪತ್ರಿಕಾಭವದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋಸ್ಮೋಪೊಲಿಟನ್ ಕ್ಲಬ್ 1901ರಲ್ಲಿ ಪ್ರಾರಂಭಗೊಂಡು ಹಲವಾರು ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ,ಕ್ರೀಡೆ ಇಂತಹ ಜನಪರ ಕೆಲಸ ಕಾರ್ಯದಲ್ಲಿ ಕೈಜೋಡಿಸಿಕೊಂಡು ಸಾಗುತ್ತಿದೆ ಎಂದರು.

ಪಂದ್ಯಕೂಟವನ್ನು ದ.ಕ. ಜಿಲ್ಲಾಧಿಕಾರಿಯವರಾದ ದರ್ಶನ್ ಎಚ್.ವಿ.ಇವರು ಉದ್ಘಾಟಿಸಲಿದ್ದಾರೆ, ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಎ.ಸದಾನಂದ ಶೆಟ್ಟಿಯವರು ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ಕಾರ್ಯದರ್ಶಿಗಳಾದ ಎಂ ಸಿ ಯೋಗೀಶ್ ಸದಸ್ಯರಾದ ದೇವಿಚರಣ್ ಶೆಟ್ಟಿ, ನಾರಾಯಣ ಶೆಟ್ಟಿ, ಮನೋಜ್ ಕುಮಾರ್, ಪ್ರಸಾದ್ ರೈ ಮುಂತಾದವರು ಉಪಸ್ಥಿತರಿದ್ದರು.

