ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 54ನೇ ಜಪ್ಪಿನಮೊಗರು ವಾರ್ಡಿನ ಶ್ರೀ ವೈದ್ಯನಾಥ ಆಟೋ ಪಾರ್ಕ್ ಗೆ ಮೇಲ್ಛಾವಣಿ ಹಾಗೂ ಇಂಟರ್ಲಾಕ್ ಅಳವಡಿಸಲಾಗಿದ್ದು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟನೆಗೊಳಿಸಿದರು.


ನಂತರ ಮಾತನಾಡಿದ ಶಾಸಕರು, ಆಟೋ ಚಾಲಕರು ಶ್ರಮಿಕ ವರ್ಗವಾಗಿದ್ದು, ಪ್ರಯಾಣಿಕರ ಜೊತೆಗೆ ತಮ್ಮ ಆಟೋಗಳ ಬಗ್ಗೆಯೂ ವಿಶೇಷ ಕಾಳಜಿ ಹೊಂದಿರುವವರು. ಸದ್ಯ ಎಲ್ಲೆಡೆ ವಿಪರೀತ ಬಿಸಿಲಿನ ವಾತಾವರಣವಿದ್ದು ತಮ್ಮ ಆಟೋಗಳು ಬಿಡುವಿನ ವೇಳೆ ನೆರಳಲ್ಲಿ ಇರಬೇಕು ಎಂದು ಬಯಸುತ್ತಾರೆ. ಅವರ ಬೇಡಿಕೆಗೆ ಅನುಗುಣವಾಗಿ ಇಲ್ಲಿಗೆ ಸುಸಜ್ಜಿತ ಮೇಲ್ಛಾವಣಿ ಹಾಗೂ ಇಂಟರ್ ಲಾಕ್ ಅಳವಡಿಸಲಾಗಿದ್ದು ಎಲ್ಲಾ ರಿಕ್ಷಾ ಚಾಲಕ ಬಂಧುಗಳಿಗೆ ಉಪಯೋಗವಾದರೆ ಅದೇ ಸಂತೋಷವೆಂದರು.

ಈ ವೇಳೆ ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ನಿಕಟ ಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ವೀಣಾ ಮಂಗಳಾ, ದಕ್ಷಿಣ ಮಹಾ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್, ಜಪ್ಪಿನಮೊಗರು ಶಕ್ತಿ ಕೇಂದ್ರ ಪ್ರಮುಖ್ ಕೀರ್ತೇಶ್ ಅಮೀನ್, ಆರಕ್ಷಕರಾದ ಗಂಗಾಧರ್, ಪ್ರಮುಖರಾದ ಸುರೇಂದ್ರ ಜೆ, ಪುಷ್ಪರಾಜ್ ಅಮೀನ್, ವೈದ್ಯನಾಥ ಆಟೋ ಪಾರ್ಕ್ ನ ಅಧ್ಯಕ್ಷರಾದ ಗಂಗಾಧರ್ ಸೇರಿದಂತೆ ಹಲವು ಚಾಲಕರು, ಸ್ಥಳೀಯರು ಉಪಸ್ಥಿತರಿದ್ದರು.





