ಬೆಂಗ್ರೆ ಶ್ರೀ ಆದಿ ನಾಗದೇವರ ಬನ ಪರಿಸರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಚಾಲನೆ

Prakhara News
1 Min Read

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗ್ರೆ ವಾರ್ಡಿನ ಶ್ರೀ ಆದಿ ನಾಗದೇವರ ಬನ ಸ್ಯಾಂಡ್‌ಪಿಟ್ ಬೆಂಗ್ರೆ ಬಳಿ ಅಭಿವೃದ್ಧಿ ಕಾಮಗಾರಿಯು ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆಯು ನಡೆಯಿತು.

ನಂತರ ಮಾತನಾಡಿದ ಶಾಸಕರು, ಇಲ್ಲಿನ ಸ್ಥಳೀಯರ ಬಹು ದಿನಗಳ ಬೇಡಿಕೆಯಂತೆ ಈ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು ಶೀಘ್ರದಲ್ಲಿ ಕಾಮಗಾರಿ ಮುಗಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು ಎಂದರು.

ಲೋಕೇಶ್ ಬೆಂಗ್ರೆ, ಮೀರಾ ಕರ್ಕೇರ, ನಿತಿನ್ ಕುಮಾರ್, ವಿನೋದ್ ಮೆಂಡನ್, ಅನಿಲ್, ಕಿಶೋರ್ ಕೊಟ್ಟಾರಿ, ಸುರೇಂದ್ರ ಪಾಂಗಳ್, ಗಂಗಾಧರ, ಸಂಜಯ್ ಸುವರ್ಣ, ಧನಂಜಯ ಪುತ್ರನ್, ಚೇತನ್ ಬೆಂಗ್ರೆ, ವಿಥುನ್, ವಾಸು ಸುವರ್ಣ, ಸುಂದರ ಸಾಲ್ಯಾನ್, ಸುಕುಮಾರ, ಜೀವನ್ ಖಾರ್ವಿ, ಸ್ಥಳೀಯ ನಿವಾಸಿಗಳು, ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.

Share This Article
Leave a Comment