ಬೆಂಗಳೂರಿನಲ್ಲಿ ಕೆಲಸಕ್ಕೆಂದು ಹೋದ ದೇರಳಕಟ್ಟೆಯ ಯುವಕ ನಾಪತ್ತೆ..!!

Prakhara News
2 Min Read

ಮಂಗಳೂರು: ಐ ಮೊಹಮ್ಮದ್ ನಿಯಾಜ್ (33) ಎಂಬವರು ದೇರಳಕಟ್ಟೆಯ ಎಸ್ ಎನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಅಗಸ್ಟ್ 2 ತನ್ನ ತಾಯಿ ಹಾಜಿರರವರಲ್ಲಿ ಬೆಂಗಳೂರಿನಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆಂದು ಹೇಳಿ ಬಟ್ಟೆ ಬರೆಗಳನ್ನು ತೆಗೆದುಕೊಂಡು ಮನೆಯಿಂದ ಹೋಗಿದ್ದು, ಅದೇ ದಿನ ಮಧ್ಯಾಹ್ನ 15-30 ಗಂಟೆಗೆ ಆತನ ಹೆಂಡತಿ ಶಹಳ ಳಿಗೆ ಫೋನ್ ಕರೆ ಮಾಡಿ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ನನ್ನ ತಂಗಿ ಮಗುವನ್ನು ನೋಡಲು ಹೋಗೋಣ ನೀನು ರೆಡಿಯಾಗಿರು ಎಂದು ತಿಳಿಸಿರುವುದಾಗಿ ಹೇಳಿರುತ್ತಾರೆ.

ನಂತರ ಶಹಳ ಳು ಪುನ: ಐ ಮೊಹಮ್ಮದ್ ನಿಯಾಜ್ ನಿಗೆ ಫೋನ್ ಕರೆ ಮಾಡಿದಾಗ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿಸಿರುತ್ತಾಳೆ. ತನ್ನ ತಮ್ಮ ಮೊಹಮ್ಮದ್ ನಿಯಾಜ್ ನು ನಮ್ಮ ಮನೆಗೆ ಬಾರದೇ ಆತನ ಹೆಂಡತಿ ಮನೆಗೂ ಬಾರದೇ ಇದ್ದುದರಿಂದ ನಾವು ನಿಯಾಜ್ ನ ಬಗ್ಗೆ ಆತನ ಸ್ನೇಹಿತರಲ್ಲಿ ಮತ್ತು ಸಂಬಂದಿಕರಲ್ಲಿ ವಿಚಾರಿಸಿದಲ್ಲಿ ಮತ್ತು ಹುಡುಕಾಡಿದಲ್ಲಿ ಈ ವರೆಗೆ ಪತ್ತೆಯಾಗಿರುವುದಿಲ್ಲ.  ಈ ಬಗ್ಗೆ  ಕೊಣಾಜೆ ಪೊಲೀಸ್ ಠಾಣಾ ಮೊ.ನಂ: 91/2025, ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಕಾಣೆಯಾದ ಐ ಮೊಹಮ್ಮದ್ ನಿಯಾಜ್ ರವರ ಚಹರೆ

ಹೆಸರು ಐ ಮೊಹಮ್ಮದ್ ನಿಯಾಜ್

ಪ್ರಾಯ             33 ವರ್ಷ

ತಂದೆ  ದಿ: ಐ ಮೊಹಮ್ಮದ್

ತಾಯಿ ಹಾಜಿರಾ

ವಿಳಾಸ ನಂಬ್ರ: 5-18/1, ಇನ್ನೋಳಿ ಕೆಳಗಿನಕೆರೆ, ಪಾವೂರು, ಉಳ್ಳಾಲ ತಾಲೂಕು

ಎತ್ತರ  ಸುಮಾರು 5.6 ಅಡಿ

ಮೈ ಬಣ್ಣ    ಗೋದಿ ಮೈ ಬಣ್ಣ

ಮೈಕಟ್ಟು     ಕೋಲು ಮುಖ, ಸಾಧಾರಣ ಮೈಕಟ್ಟು

ಕೂದಲು          ಕಪ್ಪು ಕೂದಲು

ವಿದ್ಯಾಬ್ಯಾಸ   10ನೇ ತರಗತಿ

ತಿಳಿದಿರುವ ಬಾಷೆ     ಬ್ಯಾರಿ, ಕನ್ನಡ, ತುಳು, ಹಿಂದಿ, ಮಲಯಾಳಂ

ಧರಿಸಿದ್ದ ಬಟ್ಟೆ ಬಿಳಿ ಬಣ್ಣದ ಪ್ರಿಂಟೆಡ್ ಶರ್ಟ್ ಹಾಗೂ ಕಪ್ಪು ಬಣ್ಣದ ಫಾರ್ಮಲ್ಸ್ ಪ್ಯಾಂಟ್

ಸದ್ರಿ ಐ ಮೊಹಮ್ಮದ್ ನಿಯಾಜ್ (33 ವರ್ಷ) ರವರು ಪತ್ತೆಯಾದಲ್ಲಿ ಪೊಲೀಸ್ ನಿರೀಕ್ಷಕರು, ಕೊಣಜೆ ಪೊಲೀಸ್ ಠಾಣೆ, ಮಂಗಳೂರು ನಗರ ಮೊಬೈಲ್ ನಂಬರ್ 9480802315, 9019873901 ಅಥವಾ ದೂರವಾಣಿ ಸಂಖ್ಯೆ 0824-2220536, 0824-2220800 e-mail address:- konajemgc@ksp.gov.in ಗೆ ಸಂಪರ್ಕಿಸಲು ಕೋರಲಾಗಿದೆ.

Share This Article
Leave a Comment