ಮಂಗಳೂರು: ಮ್ಯಾಟ್ರಿಮೋನಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪರಿಚಯ ಮಾಡಿಕೊಂಡು ಮದುವೆಯ ಹೆಸರಿನಲ್ಲಿ ಹಲವಾರು ಯುವತಿಯರನ್ನು ನಂಬಿಸಿ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.


ನೊಂದ ಮಹಿಳೆಯೊಬ್ಬರಿಗೆ ಸುಶಾಂತ್ ಪೂಜಾರಿ ಎಂಬಾತ ಮ್ಯಾಟ್ರಿಮೋನಿ ತಾಣದ ಮೂಲಕ ಪರಿಚಯವಾಗಿದ್ದು, 02-02-2025 ರಂದು ಮಹಾರಾಷ್ಟ್ರದ ನವ ಮುಂಬೈಯ ಘನಸೋಳಿಯಲ್ಲಿ ಮದುವೆಯಾಗಿದ್ದನು. ಬಳಿಕ ನಂಬಿಕೆ ಗಳಿಸಿಕೊಂಡು ಹಂತ ಹಂತವಾಗಿ ಒಟ್ಟು ₹6,60,000 ಹಣ ಪಡೆದುಕೊಂಡು 15-11-2025 ರಂದು ನಾಪತ್ತೆಯಾಗಿದ್ದಾನೆ. ಅನುಮಾನಗೊಂಡ ಮಹಿಳೆ ಆತನ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ, ಇದೇ ರೀತಿಯಲ್ಲಿ ಹಲವೆಡೆ ಯುವತಿಯರನ್ನು ಮದುವೆಯಾಗುತ್ತೇನೆಂದು ನಂಬಿಸಿ ಹಣ ಪಡೆದು ಮೋಸ ಮಾಡಿರುವುದು ಹಾಗೂ ಈ ಮೊದಲು ಆತನಿಗೆ ಮದುವೆಯಾಗಿರುವುದು ಬೆಳಕಿಗೆ ಬಂದಿದೆ.ಈ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 184/2025 ರಂತೆ ಬಿ ಎನ್ ಎಸ್ ಕಲಂ 318(4), 316(2), 316(1), 336(3), 340(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದ ಆರೋಪಿಯಾದ ಸುಶಾಂತ್ ಪೂಜಾರಿ @ ಸುಶಾಂತ್ ಅಂಕುಶ್ ಪೂಜಾರಿ @ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು 05-02-2026 ರಂದು ಪತ್ತೆಹಚ್ಚಿ ಬಂಧಿಸಲಾಯಿತು.

ವಿಚಾರಣೆಯಲ್ಲಿ ಆತನು 2021ರಲ್ಲಿ ಉಡುಪಿಯೊಬ್ಬಳನ್ನು ಮದುವೆಯಾಗಿರುವುದು, ಉಡುಪಿ, ಮುಂಬೈ ಬೆಂಗಳೂರು ಹಾಗೂ ಕಾರ್ಕಳ ಪ್ರದೇಶಗಳಲ್ಲಿ ಯುವತಿಯರಿಗೆ ಮದುವೆ ಭರವಸೆ ನೀಡಿ ಹಣ ಪಡೆದು ಮೋಸ ಒಪ್ಪಿಕೊಂಡಿದ್ದಾನೆ.ಬಂಧಿತನನ್ನು ಕುರಿತು ಮಾಡಿರುವುದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದೇ ಪ್ರಕರಣದಲ್ಲಿ ಆರೋಪಿ ಜೊತೆ ಕೈಜೋಡಿಸಿದ್ದ ಮುಲ್ಕಿ ನಿವಾಸಿ ಭಾಸ್ಕರ್ ಎಂಬಾತನು ದೂರುದಾರರ ಕುಟುಂಬದವರನ್ನು ನಂಬಿಸಲು “ಸುಶಾಂತ್ ನನ್ನ ಅಳಿಯ” ಎಂದು ಹೇಳಿಕೊಂಡು, ಮುಂಬೈನಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಮದುವೆ ನಡೆಸಲು ಸಹಾಯ ಮಾಡಿದ್ದಾನೆ. ಆತನನ್ನೂ బంధిసి ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸುಶಾಂತ್ ಪೂಜಾರಿ ವಿರುದ್ಧ ಈಗಾಗಲೇ ಮಂಗಳೂರು
ಉರ್ವಾ ಪೊಲೀಸ್ ಠಾಣೆ (ಅ .ಕ್ರ 202/2017 – IPC 406, 420), ಉಡುಪಿ ಜಿಲ್ಲೆಯ ಕೋಟ ಠಾಣೆ (ಅ .ಕ್ರ 132/2022 – IPC 379) ಹಾಗೂ ಮಹಾರಾಷ್ಟ್ರದ ಅರ್ನಾಲ್ ಠಾಣೆಯಲ್ಲಿ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮ್ಯಾಟ್ರಿಮೋನಿ ತಾಣಗಳ ಮೂಲಕ ಪರಿಚಯವಾಗುವ ವ್ಯಕ್ತಿಗಳ ಬಗ್ಗೆ ಸೂಕ್ತ ಪರಿಶೀಲನೆ ಮಾಡಿಕೊಳ್ಳಬೇಕು. ಮದುವೆ ಹೆಸರಿನಲ್ಲಿ ಹಣ ಬೇಡುವವರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.

