ಮಂಗಳೂರು : ನೀರುಮಾರ್ಗ ಗ್ರಾಮದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.2ರಿಂದ ಫೆ.11ರವರೆಗೆ ಸಡಗರ ಸಂಭ್ರಮದಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ತಿಳಿಸಿದ್ದಾರೆ.



ಮಾಣೂರು ಕ್ಷೇತ್ರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿ, ಫೆ.2ರಂದು ಬೆಳಗ್ಗೆ 8.00ಕ್ಕೆ ಆಚಾರ್ಯರ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮ. ರಾತ್ರಿ 7.00ರಿಂದ : ಸ್ಥಳಿಯ ಪ್ರತಿಭೆಗಳಿಂದ ಹಾಗೂ ನಾನಾ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ. ಫೆ.3ರಂದು ಬೆಳಗ್ಗೆ 8.00ರಿಂದ ಮಹಾಮೃತ್ಯುಂಜಯ ಯಾಗ, ಸಂಜೆ 5.00ರಿಂದ ನಾಗಾಲಯ ವಸ್ತ್ವಾದಿ, ನಾಗ ಬಿಂಬಾಧಿವಾಸ, ಪ್ರೋಕ್ತಹೋಮ. ರಾತ್ರಿ 7.00ರಿಂದ ಕಲ್ಲಡ್ಕ ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ. ಫೆ. 4ರಂದು ಬೆಳಗ್ಗೆ 8.00ರಿಂದ: ನವಗ್ರಹ ಶಾಂತಿ ಹೋಮ ಬಳಿಕ ನೂತನ ನಾಗಾಲಯದಲ್ಲಿ ಶ್ರೀ ನಾಗದೇವರ ಪ್ರತಿಷ್ಠೆ, ನಾಗದರ್ಶನ. 5.30ರಿಂದ : ಆಶ್ಲೇಷಾಬಲಿ, ಶ್ರೀ ಸುಬ್ರಹ್ಮಣ್ಯ ದೇವರ ಬಿಂಬ ಶಯ್ಯಾಧಿವಾಸ, ಧ್ವಜಾಧಿವಾಸ, ಸಂಜೆ 5.35ರಿಂದ : ನಂದಗೋಕುಲ ಕಲಾ ಕೇಂದ್ರ ಭಟ್ರಕೋಡಿ ನೀರುಮಾರ್ಗ ಇವರಿಂದ ನೃತ್ಯ ವೈಭವ. ರಾತ್ರಿ 7.00ರಿಂದ : ಸಭಾ ಕಾರ್ಯಕ್ರಮ. ರಾತ್ರಿ 8.30ರಿಂದ ಶಿವಾಮೃತ ನಾಟ್ಯಾಲಯ ನೀರುಮಾರ್ಗ ಇವರಿಂದ ಭರತನಾಟ್ಯ ಹಾಗೂ ಜಾನಪದ ನೃತ್ಯ ನಡೆಯಲಿದೆ ಎಂದರು.

ಫೆ. 8ರಂದು ಬ್ರಹ್ಮಕಲಶ ಕ್ಷೇತ್ರದ ಜೀರ್ಣೋದ್ಧಾರ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ್ ಭಟ್ ಬೊಳ್ಮಾರಗುತ್ತು ಮಾತನಾಡಿ, ಫೆ.8ರಂದು ಬೆಳಗ್ಗೆ 9.35ಕ್ಕೆ ಶ್ರೀ ಸುಬ್ರಾಯ ದೇವರಿಗೆ ಬ್ರಹ್ಮಕಲಶಾಭಿಷೇಕ ನಂತರ ಪರಿಕಲಶಾಭಿಷೇಕ, ರುದ್ರಯಾಗ, ದುರ್ಗಾಹೋಮ, ಮಹಾಪೂಜೆ ನೂತನ ಧ್ವಜಾರೋಹಣ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ. ಮಧ್ಯಾಹ್ನ 1.00 ರಿಂದ ಸಂದೇಶ್ ನೀರುಮಾರ್ಗ ಹಾಗೂ ಬಳಗದವರಿಂದ ಭಕ್ತಿಗಾನಾಮೃತ, ಸಂಜೆ 3.30ರಿಂದ ಕೀರ್ತನಾಮೃತ ನೃತ್ಯಕಲಾಭಾರತಿ ತಂಡ ಮತ್ತು ಸುಬ್ರಹ್ಮಣ್ಯ ಭಜನಾ ಮಂಡಳಿ. ಸಂಜೆ 5.00ರಿಂದ ಸಭಾ ಕಾರ್ಯಕ್ರಮ, ರಾತ್ರಿ 7.00ರಿಂದ ಹೂವಿನ ಪೂಜೆ, ಸಣ್ಣರಂಗ ಪೂಜೆ, ಪಲ್ಲಕ್ಕಿ ಸೇವೆ. ರಾತ್ರಿ 8.00ರಿಂದ ವಿಧಾತ್ರಿ ಕಲಾವಿದೆರ್ ಕುಡ್ಡ ಅಭಿನಯದ ನಾಟಕ ಜೈ ಹನುಮಾನ್ ಪ್ರದರ್ಶನವಾಗಲಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಭಾಸ್ಕರ್ ಕೆ., ಆನಂದ್ ಸರಿಪಲ್ಲ, ಪ್ರಧಾನ ಅರ್ಚಕರಾದ ರಾಜೇಶ್ ಭಟ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕುಂಞಣ್ಣ ಶೆಟ್ಟಿ ಕೋರೆಟ್ಟುಗುತ್ತು, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಜೆ. ಮಾಣೂರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್ ಕೋಟ್ಯಾನ್ ಪಡು, ಉಪಾಧ್ಯಕ್ಷರಾದ ಜಯಶೀಲ ಅಡ್ಯಂತಾಯ, ಎನ್ ವಿಕೆ ಭಟ್ರಕೋಡಿ ಉಪಸ್ಥಿತರಿದ್ದರು.

