ಮಂಗಳೂರು: ನಗರದ ಹೃದಯ ಭಾಗದಲ್ಲಿ ಇರುವ ಪಂಪ್ವೆಲ್ ನ ವಿಶ್ವಾಸ್ ಹೈಟ್ಸ್ ಕಟ್ಟಡದಲ್ಲಿ ಹೆಸರುವಾಸಿಯಾಗಿರುವ ಪ್ರೀಮಿಯಂ ಮೆನ್ಸ್ ವೇರ್ ಮಳಿಗೆಯ ಮತ್ತೊಂದು ಅಂಗ ಸಂಸ್ಥೆ “ಲಕ್ಷುರಿ ಬೈ ಪ್ರೀಮಿಯಂ” ಮಹಿಳೆಯರ ವೆಸ್ಟರ್ನ್ ವಸ್ತ್ರಗಳ ಹೊಸ ಮಳಿಗೆಯನ್ನು ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 12 ರ ರನ್ನರ್ ಅಪ್ ಖ್ಯಾತಿಯ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ ಗುರುವಾರ ಉದ್ಘಾಟಿಸಿದರು.


ಪ್ರೀಮಿಯಂ ಸಂಸ್ಥೆ ಇಂದಿನ ಯುವ ಪೀಳಿಗೆಗೆ ಬೇಕಾಂದಂತಹ ಸ್ಟೈಲಿಶ್ ಹಾಗೂ ಉತ್ತಮ ಗುಣಮಟ್ಟದ ರೆಡಿಮೇಡ್ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದು ಮಂಗಳೂರು, ಉಡುಪಿ, ಕಾಸರಗೋಡು ಜಿಲ್ಲೆಗಳಿಂದ ಯುವಕರು ಇಲ್ಲಿ ಬಟ್ಟೆಗಳನ್ನು ಖರೀದಿಸಲು ಬರುತ್ತಿದ್ದಾರೆ. ಈ ಉದ್ಯಮದಲ್ಲಿ ಯಶಸ್ಸು ಕಂಡ ಗೆಳೆಯರಾದ ಮುಹಾದ್, ಅಶ್ವೀರ್, ಮೋಹಿನುದ್ದೀನ್ ಹಾಗೂ ಉಯಿಸ್ ಪಾಲುದಾರಿಕೆಯಲ್ಲಿ ಮಹಿಳೆಯರಿಗಾಗಿ ವೆಸ್ಟರ್ನ್ ವಸ್ತ್ರ ಮಳಿಗೆ ಲಕ್ಷುರಿ ಬೈ ಪ್ರೀಮಿಯಂ ಅನ್ನು ಪರಿಚಯಿಸಿದ್ದಾರೆ.



ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ರಕ್ಷಿತಾ ಶೆಟ್ಟಿ ಲಕ್ಷುರಿ ಬೈ ಪ್ರೀಮಿಯಂ ಮಳಿಗೆಯ ಬಟ್ಟೆಗಳು ತುಂಬಾ ಸರಳವಾಗಿ ಹಾಗೂ ಸ್ಟೈಲಿಶ್ ಕಲೆಕ್ಷನ್ ಗಳನ್ನು ಹೊಂದಿದ್ದು ಈ ಸಂಸ್ಥೆ ಇನ್ನಷ್ಟು ಹೆಸರುವಾಸಿಯಾಗಿ ಇನ್ನೂ ಹಲವಾರು ಶಾಖೆಗಳನ್ನು ತೆರೆಯಲಿ ಎಂದು ಶುಭ ಹಾರೈಸಿದರು..

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯು ನಿಕಟ ಪೂರ್ವ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ್ ಪಾಂಡೇಶ್ವರ್, ಸಂದೀಪ್ ಗರೋಡಿ, ಶ್ರೀಮತಿ ಚಂದ್ರಾವತಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಮೊಹಮ್ಮದ್ ಅಲಿ, ಮೊಹಮ್ಮದ್ ತೌಸೀಫ್ ಯು.ಟಿ, ಸುಹೈಲ್ ಕಂದಕ್, ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೋಲ್ಡನ್ ರೆಹಮಾನ್, ಚಿತ್ರನಟ ರೋಷನ್ ಶೆಟ್ಟಿ, ಫೆಡರಲ್ ಬ್ಯಾಂಕ್ ನ ವ್ಯವಸ್ಥಾಪಕರಾದ ಭರತ್.ಎಸ್, ಉದ್ಯಮಿಗಳಾದ ಲಂಚುಲಾಲ್ ಕೆ.ಎಸ್ , ಭರತ್ ಬಲ್ಲಾಳ್ ಬಾಗ್,ಲತೀಶ್ ಆಕಾಶಭವನ, ಆಸಿಫ್ ಅಲಿ ಕೂತನ, ಶಬೀರ್ ಕೆಂಪಿ, ಮಿಜ್ನಾ, ಹಿಜಾಬಿ ದಾಯಿಡ್, ಆರ್ಟ್ ಜೋನ್ ಸಂಸ್ಥೆಯ ಹಿನಾಝ್ ಶೇಖ್, ಚುಮನ್ ಮಣಿಕಂಠ ಹಾಗೂ ಮುಂತಾದವರು ಉಪಸ್ತಿತರಿದ್ದರು.


