ಮಂಗಳೂರು: ದಕ್ಷಿಣ ಭಾರತದ ಜನಪ್ರಿಯ ಹಾಗೂ ವಿಶ್ವಾಸಾರ್ಹ ಹಣ್ಣು , ತರಕಾರಿ, ದಿನ ಸಾಮಗ್ರಿಗಳ ಸೂಪರ್ ಮಾರ್ಕೆಟ್ ಬ್ರಾಂಡ್ ಆಗಿರುವ “KPN ಫ್ರೆಶ್” ಮಂಗಳೂರಿನ ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ತನ್ನ ಮಳಿಗೆಗಳನ್ನು ತೆರೆದಿದೆ.



ಮಂಗಳೂರಿನ ಮಂಗಳಾದೇವಿ, ಮಾರ್ನಮಿಕಟ್ಟೆ, ಗಾಂಧಿನಗರ ಹಾಗೂ ಕುಲಶೇಖರದಲ್ಲಿ ತನ್ನ ಶಾಖೆಗಳನ್ನು ಪ್ರಾರಂಭ ಮಾಡಿದ್ದು “KPN ಫ್ರೆಶ್” ಜನರಿಗೆ ಮಾಸಿಕ ದಿನಸಿ ಅಗತ್ಯಗಳನ್ನು ಒಂದೇ ಕಡೆ ದೊರಕುವಂತೆ ಅನುಕೂಲ ಮಾಡಿದೆ, ರೈತರು ಬೆಳೆದ ತಾಜಾ ತರಕಾರಿ, ಹಣ್ಣು ಹಂಪಲುಗಳನ್ನು ಪ್ರತಿದಿನ ಜನರಿಗೆ ನೇರವಾಗಿ ತಲುಪಿಸುವ ಉದ್ದೇಶ ಸಂಸ್ಥೆಯದ್ದಾಗಿದೆ.
ಉದ್ಘಾಟನೆಯ ಭಾಗವಾಗಿ “KPN ಫ್ರೆಶ್” ಜನರಿಗೆ ಹಲವು ಆಫರ್ ಗಳನ್ನು ಪರಿಚಯಿಸಿದೆ.

ಇನ್ನೂರಕ್ಕೂ ಹೆಚ್ಚು ವಸ್ತುಗಳ ಮೇಲೆ ಒಂದು ಕೊಂಡರೆ ಒಂದು ಉಚಿತ ಆಫರ್ ಗಳಿದ್ದು ಅಲ್ಲದೆ ಪ್ರತಿ ದಿನ ಕನಿಷ್ಠ ಐದು ಶೇಖಡಾ ದಿಂದ ಐವತ್ತು ಶೇಕಡಾದವರೆಗೆ ವಸ್ತುಗಳ ಮೇಲೆ ರಿಯಾಯಿತಿ ದರದಲ್ಲಿ ಇಲ್ಲಿ ವಸ್ತುಗಳು ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯು ತಿಳಿಸಿದೆ.

