ಕಾಂತಾರಾ ಚಾಪ್ಟರ್ 1 ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಕರಾವಳಿ ಭಾಗದ ಚಿತ್ರಮಂದಿರಗಳಲ್ಲೂ ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಜನರು ಬಹು ಪರಾಕ್ ಹೇಳುತ್ತಿದ್ದಾರೆ.


ಅಕಾಲಿಕವಾಗಿ ನಿಧನ ಹೊಂದಿದ ಹಾಸ್ಯ ನಟ ರಾಕೇಶ್ ಪೂಜಾರಿ ಸಿನಿಮಾದಲ್ಲಿ ನಟಿಸಿದ್ದು, ಆತನ ಸ್ನೇಹಿತರು ರಾಕೇಶ್‌ನನ್ನು ನೆನೆದು ಕಣ್ಣೀರಾಗಿದ್ದಾರೆ. ಮಂಗಳೂರಿನ ಪ್ರಭಾತ್ ಚಿತ್ರಮಂದಿರ ಮುಂದೆ ಮೂವತ್ತು ಅಡಿ ಎತ್ತರ ರಾಕೇಶ್ ಕಟೌಟ್ ನಿರ್ಮಾಣ ಮಾಡಲಾಗಿದೆ. ಕಟೌಟ್ ಗೆ ಪುಷ್ಪಾರ್ಚನೆ ಮಾಡಿದ ರಾಕೇಶ್ ಪೂಜಾರಿ ಸ್ನೇಹಿತರು ರಾಕೇಶ್ ಪೂಜಾರಿ ಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಮೂರು ವರ್ಷಗಳ ರಾಕೇಶ್ ಪೂಜಾರಿಯ ಶ್ರಮ ನೆನಪಿಸಿಕೊಂಡು ಭಾವುಕರಾಗಿದ್ದಾರೆ.
