ಬೆಳ್ತಂಗಡಿ : ಪಟ್ಟ ಜಾಗದಲ್ಲಿ ರೋಪ್ ಬಳಸಿ ಉರುಳು ಇಟ್ಟು ಕಾಡು ಹಂದಿಯನ್ನು ಬೇಟೆಯಾಡಿ ಅದನ್ನು ಮನೆಯ ಶೇಡ್ ನಲ್ಲಿ ಮಾಂಸ ಮಾಡುತ್ತಿದ್ದಾಗ ವೇಣೂರು ಅರಣ್ಯ ಇಲಾಖೆ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದು ಕಾಡು ಹಂದಿ ಮಾಂಸ ಮತ್ತು ಪರಿಕರಗಳನ್ನು ವಶಪಡಿಸಿಕೊಂಡು ವನ್ಯಜೀವಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ರಮೇಶ್ ಹೆಗ್ಡೆ ಎಂಬವರ ಪಟ್ಟ ಜಾಗದಲ್ಲಿ ರೋಪ್ ಬಳಸಿ ಉರುಳು ಇಟ್ಟು ಕಾಡು ಹಂದಿಯನ್ನು ಬೇಟೆಯಾಡಿ ಅದನ್ನು ಹೊಸ ಮನೆ ಸುಧಕಾರ ಎಂಬವರ ಮನೆಯ ಶೇಡ್ ಗೆ ತಂದು ಮಾಂಸ ಮಾಡುತ್ತಿದ್ದ ಬಗ್ಗೆ ವೇಣೂರು ವಲಯ ಅರಣ್ಯ ಇಲಾಖೆಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳ ಜೊತೆ ಆಗಸ್ಟ್ 8 ರಂದು ಬೆಳಗ್ಗೆ 11 ಗಂಟೆಗೆ ದಾಳಿ ಮಾಡಿದ್ದಾರೆ.
ದಾಳಿ ವೇಳೆ ಶೇಡ್ ನಲ್ಲಿ ಕಾಡು ಹಂದಿ ಮಾಂಸ ಮಾಡಿ ಮಾರಾಟ ಮಾಡಲು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟ 35 ಕೆ.ಜಿ ಹಂದಿ ಮಾಂಸ, ಒಂದು ಗ್ಯಾಸ್ ಸಿಲಿಂಡರ್, 4 ಕತ್ತಿ, ಒಂದು ತೂಕದ ತಕ್ಕಡಿ,ಮಾಂಸ ಕಡಿಯಲು ಬಳಸಿದ ಎರಡು ಮರದ ತುಂಡು,ಮಾಂಸ ಸಾಗಾಟ ಮಾಡಲು ಬಳಸಿದ ಒಂದು KA-21-A-9700 ನಂಬರಿನ ಗೂಡ್ಸ್ ರಿಕ್ಷಾ ವಾಹನ ಸಮೇತ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಡು ಹಂದಿ ಮಾಂಸ ಮಾಡುತ್ತಿದ್ದ ಹೊಸ ಮನೆ ನಿವಾಸಿ ಮಾಲೀಕ ಸುಧಾಕರ್ ಮತ್ತು ಗೂಡ್ಸ್ ರಿಕ್ಷಾ ಚಾಲಕ ಸುಕೇಶ್ ದಾಳಿ ವೇಳೆ ಸ್ಥಳದಿಂದ ಪರಾರಿಯಾಗಿದ್ದು. ಬಲ್ಯಕೋಡಿ ನಿವಾಸಿ ಯುವರಾಜ್(37) ಮತ್ತು ಹೊಸಮನೆ ನಿವಾಸಿ ರಮೇಶ್ ಹೆಗ್ಡೆ (55) ಎಂಬವರನ್ನು ವೇಣೂರು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ಆ.20 ರಂದು ಮೂಡಬಿದಿರೆ ಎಸಿಎಫ್ ಮುಂದೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿ ಕಳುಹಿಸಿದ್ದಾರೆ.ಈ ಬಗ್ಗೆ ವೇಣೂರು ಅರಣ್ಯ ಇಲಾಖೆಯಲ್ಲಿ ವನ್ಯಜೀವಿ 1972 ರಲ್ಲಿ 9,50,51 ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೂಡಬಿದಿರೆ ಎಸಿಎಫ್ ಶ್ರೀಧರ್ ಮಾರ್ಗದರ್ಶನದಲ್ಲಿ ವೇಣೂರು ವಲಯ ಅರಣ್ಯಾಧಿಕಾರಿ ಭರತ್.ಯು.ಜಿ, ಉಪ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್ ಮತ್ತು ಸುನಿಲ್ ಕುಮಾರ್, ಗಾರ್ಡ್ ದಿವಕರ್ ಮತ್ತು ಮಂಜುನಾಥ್ ಹಾಗೂ ಚಾಲಕ ಅಶ್ಲೇಸ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
