ಉಡುಪಿ: ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನದ ಚಾಲಕ ಹೃದಯಾಘಾತದಿಂದ ಮೃತ್ಯು ..!

Prakhara News
1 Min Read

‌ಉಡುಪಿ: ಪ್ರಗತಿನಗರದ ಕೇಂದ್ರ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಟಿ.ಟಿ. ವಾಹನದ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂದು ಶುಕ್ರವಾರ ಬೆಳಿಗ್ಗೆ ನಡೆದಿದೆ.‌

ವಿದ್ಯಾರ್ಥಿಗಳನ್ನು ಶಾಲೆಗೆ ಸಾಗಿಸುತ್ತಿರುವಾಗ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಮಾರುಥಿ ವೀಥಿಕಾದಲ್ಲಿ ನಡೆದುಕೊಂಡು ಸಾಗುತ್ತಿದ್ದ ಸಮಾಜಸೇವಕ ನಿತ್ಯಾನಂದ‌ ಒಳಕಾಡುರವರನ್ನು ಕಂಡು ವಾಹನ ನಿಲ್ಲಿಸಿದ ಚಾಲಕ, ಎದೆ‌ನೋವಿನ ವಿಚಾರವನ್ನು ಒಳಕಾಡುರವರಲ್ಲಿ ಹೇಳಿಕೊಂಡಿದ್ದಾರೆ. ತಕ್ಷಣ ಒಳಕಾಡುರವರು ಅಂಬುಲೆನ್ಸ್ ವಾಹನದಲ್ಲಿ ಚಾಲಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರಿಂದ ಚಾಲಕ ಮೃತಪಟ್ಟಿರುವುದು ತಿಳಿದುಬಂದಿತು.

ಮೃತ ಚಾಲಕ ಕಾರ್ಕಳ ತಾಲೂಕಿನ ನೀರೆ ಬೈಲೂರಿನ ಮೊಯ್ದಿನ್ ಬಾವ (65ವ) ಎಂದು ತಿಳಿದುಬಂದಿದೆ.‌ ವಿದ್ಯಾರ್ಥಿಗಳಿರುವ ಶಾಲಾ ವಾಹನ‌ ಚಲನೆಯಲ್ಲಿದ್ದಾಗ ಚಾಲಕ‌ ಮೃತಪಟ್ಟಲ್ಲಿ ದೊಡ್ಡಮಟ್ಟದ ಅವಘಡ ಸಂಭವಿಸುವುದರಲ್ಲಿತ್ತು. ಒಳಕಾಡುರವರು‌ ತುರ್ತು ಸಂದರ್ಭದಲ್ಲಿ ಚಾಲಕನಿಗೆ ಕಂಡಿದ್ದರಿಂದ‌ ಸಂಭವನೀಯ ದುರಂತವು ತಪ್ಪಿದಂತಾಗಿದೆ.

Share This Article
Leave a Comment