ಬೊಕ್ಕ ಪಟ್ಟಣ ಸರಕಾರಿ ಶಾಲೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ‘ಹರಿದ್ವರ್ಣ’ ಕಿರುಚಿತ್ರದ 29ನೇ ಪ್ರದರ್ಶನ

Prakhara News
1 Min Read

ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಬೊಕ್ಕಪಟ್ಟನ ಇದರ ಸಹಭಾಗಿತ್ವದಲ್ಲಿ ನ್ಯಾಷನಲ್ ಅವಾರ್ಡ್ ವಿಜೇತ ಕನ್ನಡ ಕಿರುಚಿತ್ರ ಹರಿದ್ವರ್ಣ (ರಕ್ಷತಿ ರಕ್ಷಿತಃ) ಇದರ 29ನೇ ಪ್ರದರ್ಶನ 28.03.2026ನೇ ಬೆಳಿಗ್ಗೆ ಬೊಕ್ಕಪಟ್ಟನ ಸರಕಾರಿ ಶಾಲೆಯಲ್ಲಿ ನಡೆಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ Rtn.ಭಾಸ್ಕರ್ ರೈ ಕಟ್ಟ ಅವರು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಬೊಕ್ಕಪಟ್ಟಣದ ಶಾಲಾ ಆವರಣವನ್ನು ಕಂಡು ಕೊಂಡಾಡಿದರು. ಕಸ್ವಿ ಯ ಮೊದಲ ಹುಟ್ಟುಹಬ್ಬಕ್ಕೆ ಆರಂಭವಾದ ಸಂಸ್ಥೆ ಹಾಗೂ ಪ್ರಕೃತಿಯ ಉಳಿವಿನತ್ತ ಮಾಡುತ್ತಿರುವ ಕೆಲಸ ಕಾರ್ಯಗಳಿಗೆ ಪುಟಾಣಿ ಕಸ್ವಿ ಯನ್ನು ಸನ್ಮಾನಿಸಿದರು, ಇದು ಪ್ರತಿಯೊಂದು ಮಕ್ಕಳಿಗೂ ಪ್ರೇರಣೆ ಯಾಗಿರಲಿ ಎಂದರು.

ಶ್ರೀಯುತ ಕೆ ವಸಂತ್ ರಾವ್ ಮಾತನಾಡಿ 2013ರಲ್ಲಿ ತಾನು ಮುತ್ತೂಟ್ ಫಿನ್ಕಾರ್ಪ್ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಆಗಿನ ರೊಟ್ರಾಕ್ಟ್ ಕ್ಲಬ್ ಮಂಗಳೂರು ಸಿಟಿ ಇದರ ಅಧ್ಯಕ್ಷರಾದ ಕೇಶವ ರಾಮಕುಂಜ ರವರು ಬಿಇಎಂ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಿ ನೆಟ್ಟ ಮಾವಿನ ಗಿಡಗಳು ಇಂದು ಹಣ್ಣುಗಳನ್ನು ನೀಡುತ್ತಿದೆ ಎಂದು ನೆನೆದರು.

ಶಾಲಾ ಮುಖ್ಯೋಪಾಧ್ಯಾಯರು ಮಾತನಾಡಿ ಈ ಹಿಂದೆಯೂ ಕಸ್ವಿಯ ಹುಟ್ಟುಹಬ್ಬ ಪ್ರಯುಕ್ತ ಶಾಲಾ ವಠಾರದಲ್ಲಿ ಔಷಧೀಯ ವನ ನಿರ್ಮಾಣ ಮಾಡಿದ ಕಾರ್ಯಕ್ಕೆ ಧನ್ಯವಾದ ತಿಳಿಸಿ,ಚೇತನ್ ಕೆ ವಿಟ್ಲ ನಿರ್ದೇಶನದ, ಕಸ್ವಿ ಹಸಿರು ದಿಬ್ಬಣ ನಿರ್ಮಾಣದ ಹರಿದ್ವರ್ಣ ಕಿರುಚಿತ್ರಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಜೀತ್ ರೋಚ್, Rtn.ಗೀತಾ ಬಿ ರೈ ,ಕಸ್ವಿ ಹಸಿರು ದಿಬ್ಬಣದ ಅಧ್ಯಕ್ಷರಾದ ಶ್ರೀಮತಿ ಶ್ರದ್ಧಾ ಕೇಶವ ರಾಮಕುಂಜ, ಪುಟಾಣಿ ಕಸ್ವಿ , ಶಾಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಡ್ರೆಸಿಲ್ ಲಿಲ್ಲಿ ಮೆನೆಜಸ್ ಸ್ವಾಗತಿಸಿ (ಧನ್ಯವಾದ ವೀಣಾಧಾರಿಣಿ)ಕಲ್ಪನಾ ಆರ್ ಕಾರ್ಯಕ್ರಮ ನಿರೂಪಿಸಿದರು.

Share This Article
Leave a Comment