ತೋಟದ ಮಧ್ಯೆ ಹಾದುಹೋಗಿದ್ದ ವಿದ್ಯುತ್ ತಂತಿ ಕಡಿದು ಬಿದ್ದು ಅನಾಹುತ


ಪುತ್ತೂರು: ತಾಲೂಕಿನ ಕುರಿಯ ಗ್ರಾಮದ ಬೂಡಿಯಾರಿನಲ್ಲಿ ತೋಟದ ಮಧ್ಯೆ ಹಾದು ಹೋಗಿದ್ದ ವಿದ್ಯುತ್ ತಂತಿ ಮುರಿದು ಬಿದ್ದ ಪರಿಣಾಮವಾಗಿ ತೋಟಕ್ಕೆ ಬೆಂಕಿ ಹತ್ತಿಕೊಂಡು 900ಕ್ಕೂ ಅಧಿಕ ಅಡಿಕೆ ಗಿಡಗಳು ಸುಟ್ಟು ಕರಕಲಾದ ಘಟನೆ ಮಂಗಳವಾರ ಸಂಭವಿಸಿದೆ.
ಬೂಡಿಯಾರಿನ ಗಣೇಶ್ ರೈ ಎಂಬವರ ತೋಟ ಪೂರ್ತಿಯಾಗಿ ಬೆಂಕಿಗಾಹುತಿಯಾಗಿದೆ. ಒಂದು ವರ್ಷದ ಹಿಂದಷ್ಟೇ ನೆಟ್ಟ ಅಡಿಕೆ ಗಿಡಗಳು ಉತ್ತಮವಾಗಿ ಬೆಳೆದು ನಿಂತಿದ್ದವು. ಮಂಗಳವಾರ ಮಧ್ಯಾಹ್ನದ ಹೊತ್ತು ವಿದ್ಯುತ್ ತಂತಿ ಕಡಿದು ಬಿದ್ದಿದ್ದು, ವಿದ್ಯುತ್ ಹರಿಯುತ್ತಿದ್ದ ತಂತಿಯಿಂದಾಗಿ ಬೆಂಕಿ ಹತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ತೋಟಕ್ಕೆ ವ್ಯಾಪಿಸಿದೆ.

