ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯನ ಜೊತೆ ಎಸ್.ಐ.ಟಿ ಅಧಿಕಾರಿಗಳು ಬೆಂಗಳೂರಿನ ಬಗಳಗುಂಟೆಯ ಪೀಣ್ಯ ದಲ್ಲಿರುವ ಜಯಂತ್ ಟಿ ಬಾಡಿಗೆ ಮನೆ ಮೇಲೆ ಆ.30 ರಂದು ಮಧ್ಯಾಹ್ನ ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ದಾಳಿ ಮಾಡಿದ್ದಾರೆ.


ದಾಳಿ ಮಾಡುವ ವೇಳೆ ಜಯಂತ್.ಟಿ ಮಗ ಎಸ್.ಐ.ಟಿ ಅಧಿಕಾರಿಗಳಿಗೆ ಮನೆಯನ್ನು ಕೀ ನೀಡಿ ಓಪನ್ ಮಾಡಿಸಿ ಮನೆಯೊಳಗೆ ಶೋಧ ನಡೆಸುತ್ತಿದ್ದಾರೆ. ಎಸ್.ಐ.ಟಿ ಶೋಧ ವೇಳೆ ಜಯಂತ್.ಟಿ ಪತ್ನಿಯ ಹಳೆ ಆಂಡ್ರೈಡ್ ಮೊಬೈಲ್ ಫೋನ್ ವಶಕ್ಕೆ ಪಡೆದು ಮಹಜರು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕಾರ್ಯದರ್ಶಿ ಕಿರಣ್ ಮತ್ತು ಮಿತ್ತಬಾಗಿಲು ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಜಿತ್ ಎಸ್.ಐ.ಟಿ ಅಧಿಕಾರಿಗಳ ಜೊತೆ ಮಹಜರಿಗೆ ತೆರಳಿದ್ದಾರೆ. ಮಂಗಳೂರು ಎಫ್ಎಸ್‌ಎಲ್ ವಿಭಾಗದ ಸೋಕೊ ಸಿಬ್ಬಂದಿ ಸುಮನ್, ಅರ್ಪಿತಾ, ಕಾವ್ಯಶ್ರೀ ಕೂಡ ಮಹಜರು ಮಾಡುತ್ತಿದ್ದಾರೆ.
