ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎಸ್ಐಟಿ ಅಧಿಕಾರಿಗಳು ಬುರುಡೆ ಮೂಲ ಕೆದಕುತ್ತಿದ್ದು, ಈ ಒಂದು ಬುರುಡೆ ಎಲ್ಲಿಂದ ಬಂತು? ಹೇಗೆ ಬಂತು? ಯಾರು ಮೊದಲು ಈ ಬುರುಡೆ ಕಥೆ ಕಟ್ಟಿದ್ದಾರೆ ಎನ್ನುವುದನ್ನು ತನಿಖೆ ನಡೆಸುತ್ತಿದ್ದು ಈ ವೇಳೆ ಚಿನ್ನಯ್ಯ ಎಸ್ಐಟಿ ಅಧಿಕಾರಿಗಳ ಮುಂದೆ ಸ್ಪೋಟಕವಾದ ವಿಚಾರ ಬಾಯಿಬಿಟ್ಟಿದ್ದಾನೆ.


ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ರಸ್ಟ್ ಸಿಕ್ಕಿದೆ, ಬುರುಡೆ ತಂದಿದ್ದು ಸೇಲಂನಿಂದಲೂ ಅಲ್ಲ ಮಂಡ್ಯದಿಂದಲೂ ಅಲ್ಲ. ನನಗೆ ಜಯಂತ್ ಬುರುಡೆ ಕೊಟ್ಟಿರುವುದು ಅಂತ ಚಿನ್ನಯ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ. ಜಯಂತ್ ಮನೆಯಲ್ಲಿ ನನಗೆ ಬುರುಡೆ ಮತ್ತು ಮೂಳೆ ಕೊಟ್ಟರು ಜಯಂತ್ ಮನೆಯಲ್ಲಿಯೇ ನಾನು ಮೊದಲು ಬುರುಡೆ ನೋಡಿದ್ದು ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾನೆ.
ಟ್ರಾವೆಲ್ ಹಿಸ್ಟರಿ ಸಮೇತ ಚಿನ್ನಯ ಹೇಳಿಕೆ ನೀಡಿದ್ದು, ತಮಿಳುನಾಡಿನಿಂದ ನೇರವಾಗಿ ಬೆಂಗಳೂರಿಗೆ ಭೇಟಿ ನೀಡಿದ್ದೇನೆ. ಬಾಗಲಗುಂಟೆಗೆ ಪ್ರಯಾಣ ಬೆಳೆಸಿದ್ದೇನೆ ಮೂರು ದಿನ ಜಯಂತ್ ಮನೆಯಲ್ಲಿ ನಾನು ಉಳಿದಿದ್ದೇನೆ. ಮನೆ ಹಾಗೂ ಟೆರೇಸ್ ಮೇಲೆ ಕುಳಿತು ಮಾತುಕತೆ ನಡೆಸಿದ್ದೇವೆ. ಜಯಂತ್ ಮತ್ತು ಚಿನ್ನಯ್ಯ ಸೇರಿದಂತೆ ಹಲವರು ಚರ್ಚಿಸಲಾಗಿದೆ. ಈ ವೇಳೆ ನನಗೆ ಜಯಂತ ಮನೆಯಲ್ಲಿ ಬುರುಡೆ ಕೊಟ್ಟಿದ್ದಾರೆ ಎಂದು ಚಿನ್ನಯ್ಯ ಹೇಳಿಕೆ ಕೊಟ್ಟಿದ್ದಾನೆ.
