ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ : RTI ಮಾಹಿತಿಯಲ್ಲಿ ಬಯಲಾಯ್ತು ಸ್ಫೋಟಕ ಅಂಶ

Prakhara News
1 Min Read

ಒಂದುಕಡೆ ಧರ್ಮಸ್ಥಳದಲ್ಲಿ ನೂರಾರು ಹೆಣ್ಣು ಮಕ್ಕಳ ಶವ ಹೂತು ಹಾಕಿದ್ದೇನೆ ಎಂದು ಹೇಳಿರುವ ಅನಾಮಿಕನ ದೂರಿನ ಮೇರೆಗೆ ಎಸ್​ಐಟಿ ತನಿಖೆ ಪ್ರಗತಿಯಲ್ಲಿದೆ. ಉತ್ಖನನವೂ ನಡೆಯುತ್ತಿದೆ. ಮತ್ತೊಂದೆಡೆ, ಧರ್ಮಸ್ಥಳ ಪರಿಸರದಲ್ಲಿ ಶವಗಳನ್ನು ಹೂಳಲಾಗಿರುವ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ.

ಹೌದು 1987 ರಿಂದ 2025 ರ ಅವಧಿಯಲ್ಲಿ ಧರ್ಮಸ್ಥಳ ಆಸುಪಾಸಿನಲ್ಲಿ ಶಿಶುಗಳದ್ದೂ ಸೇರಿದಂತೆ 279 ಶವಗಳನ್ನು ಹೂಳಲಾಗಿದೆ. ಇವುಗಳಲ್ಲಿ ಹೆಚ್ಚಿನವು ಆತ್ಮಹತ್ಯೆ ಪ್ರಕರಣಗಳು ಎಂದು ಆರ್​​ಟಿಐ ಅಡಿ ಪಡೆಯಲಾದ ಮಾಹಿತಿಯಿಂದ ತಿಳಿದುಬಂದಿದೆ.ಧರ್ಮಸ್ಥಳ ಆಸುಪಾಸಿನಲ್ಲಿ ಹೂಳಲಾದ 279 ಅನಾಥ ಶವಗಳಲ್ಲಿ 219 ಪುರುಷರ ಶವಗಳು ಮತ್ತು 46 ಮಹಿಳೆಯರ ಶವಗಳಾಗಿವೆ. ಶಿಶುಗಳದ್ದು ಸೇರಿದಂತೆ 14 ಶವಗಳ ಲಿಂಗವನ್ನು ಗುರುತಿಸಲು ಸಾಧ್ಯವಾಗಿಲ್ಲ.

ಈ ರೀತಿ ಮಾಹಿತಿಯನ್ನು ಧರ್ಮಸ್ಥಳ ಗ್ರಾಮ ಪಂಚಾಯತಿಯ ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಅವರಿಂದ ಆರ್‌ಟಿಐ ಅಡಿಯಲ್ಲಿ ಪಡೆದ ಮಾಹಿತಿಯಿಂದ ತಿಳಿದುಬಂದಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.2003-2004, 2006-2007 ಮತ್ತು 2014-2015ರ ಅವಧಿಯಲ್ಲಿ 17 ಅನಾಥ ಶವಗಳನ್ನು ಹೂಳಲಾಗಿದೆ. ಕಳೆದ 10 ವರ್ಷಗಳಿಂದ 101 ಅನಾಥ ಶವಗಳನ್ನು ಹೂಳಲಾಗಿದೆ. ಹೆಚ್ಚಿನ ಸಾವುಗಳು ಆತ್ಮಹತ್ಯೆಯಿಂದಾಗಿ ಸಂಭವಿಸಿವೆ ಎಂಬುದು ಆರ್​ಟಿಐ ಅರ್ಜಿ ಅಡಿ ಪಡೆದ ಮಾಹಿತಿಯಿಂದ ತಿಳಿದುಬಂದಿದೆ. ಮೃತದೇಹಗಳು ಕೊಳೆತು ದುರ್ವಾಸನೆ ಬರುತ್ತಿರುವ ಸ್ಥಿತಿಯಲ್ಲಿದ್ದುದರಿಂದ ಅವುಗಳನ್ನು ಅಲ್ಲಲ್ಲೇ ಹೂಳಲಾಗಿತ್ತು ಎಂಬ ಮಾಹಿತಿ ದೊರೆತಿದೆ.

Share This Article
Leave a Comment