ಧರ್ಮಸ್ಥಳ ಮೃತದೇಹ ಹೂತು ಹಾಕಿದ ಪ್ರಕರಣ: ಎಸ್.ಐ.ಟಿ ತಂಡಕ್ಕೆ 20 ಅಧಿಕಾರಿಗಳ ನೇಮಕ

Prakhara News
1 Min Read

ಬೆಳ್ತಂಗಡಿ : ಹಲವರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ವಿಶೇಷ ತನಿಖಾ ಸಂಸ್ಥೆ(SIT) ರಚನೆ ಮಾಡಿ ಅದಕ್ಕೆ ಮುಖ್ಯಸ್ಥರಾಗಿ ಐಪಿಎಸ್ ಪ್ರಣವ ಮೋಹಾಂತಿ ಹಾಗೂ ಸದಸ್ಯರಾಗಿ ಐಪಿಎಸ್ ಗಳಾದ ಎಂ.ಎನ್.ಅನುಚೇತ್, ಸೌಮ್ಯಲತ, ಜಿತೇಂದ್ರ ಕುಮಾರ್ ದಯಾಮ ರವರನ್ನು ಜುಲೈ 19 ರಂದು ನೇಮಕ ಮಾಡಿತ್ತು.ಇದೀಗ ಈ ತಂಡಕ್ಕೆ 20 ಅಧಿಕಾರಿಗಳನ್ನು ಎಸ್.ಐ.ಟಿ ಮೆಮೋ ನೀಡಿದ ಹಿನ್ನಲೆಯಲ್ಲಿ ನೇಮಕ ಮಾಡಿ ಜುಲೈ 22 ರಂದು ಡಿಜಿಪಿ ಸಲೀಂ ಆದೇಶ ಹೊರಡಿಸಿದ್ದಾರೆ.

20 ಅಧಿಕಾರಿಗಳು: ಸಿ.ಎ.ಸೈಮನ್ ಎಸ್ಪಿ, ಡಿಸಿಆರ್ಇ, ಮಂಗಳೂರು, ಲೋಕೇಶ್ ಎ.ಸಿಡಿಎಸ್ಪಿ ಸಿಇಎನ್ ಪಿಎಸ್, ಉಡುಪಿ, ಮಂಜುನಾಥ್- ಡಿಎಸ್ಪಿ ಸಿಇಎನ್ ಪಿಎಸ್, ಡಿಕೆ, ಮಂಜುನಾಥ್- ಪಿಐ, ಸಿಎಸ್ಪಿ, ಸಂಪತ್ ಇ.ಸಿ-ಪಿಐ, ಸಿಎಸ್ಪಿ, ಕುಸುಮಾಧರ್ ಕೆ- ಪಿಐ, ಸಿಎಸ್ಪಿ,ಮಂಜುನಾಥ್ ಗೌಡ-ಪಿಐ ಶಿರಸಿ ಗ್ರಾಮಾಂತರ, ಉತ್ತರ ಕನ್ನಡ, ಸಾವಿತ್ರು ತೇಜ್ ಪಿ.ಡಿ- ಸಿಪಿಐ, ಬೈಂದೂರು, ಉಡುಪಿ, ಕೋಕಿಲಾ ನಾಯಕ್- ಪಿಎಸ್ಐ, ಸಿಎಸ್ಪಿ, ವಾಯ್ಲೆಟ್ ಫೆಮಿನಾ- ಪಿಎಸ್ಐ, ಸಿಎಸ್ಪಿ, ಶಿವಶಂಕರ್- ಪಿಎಸ್ಐ, ಸಿಎಸ್ಪಿ,ರಾಜ್ ಕುಮಾರ್ ಉಕ್ಕಲಿ- ಪಿಎಸ್‌ಐ ಸಿರ್ಸಿ ಎನ್‌ಎಂ ಪಿಎಸ್, ಉತ್ತರ ಕನ್ನಡ, ಸುಹಾಸ್ ಆರ್-ಪಿಎಸ್ಐ, ತನಿಖೆ, ಅಂಕೋಲಾ ಪಿ.ಎಸ್, ಉತ್ತರ ಕನ್ನಡ ,ವಿನೋದ್ ಎಸ್.ಕಲ್ಲಪ್ಪನವರ್- ಪಿಎಸ್ಐ, ತನಿಖೆ, ಮುಂಡಗೋಡ ಪಿಎಸ್, ಉತ್ತರ ಕನ್ನಡ ,ಗುಣಪಾಲ್ ಜೆ- ಪಿಎಸ್ ಐ, ಮೆಸ್ಕಾಂ, ಮಂಗಳೂರು,ಸುಭಾಷ್ ಕಾಮತ್-ಎಎಸ್ಐ, ಉಡುಪಿ ಟೌನ್ ಪಿಎಸ್, ಹರೀಶ್ ಬಾಬು- ಸಿಎಚ್ ಸಿ 91, ಕಾಪು ಪಿಎಸ್ ಉಡುಪಿ,ಪ್ರಕಾಶ್- ಸಿಎಚ್‌ಸಿ 1140, ಮಲ್ಪೆ ವೃತ್ತ ಕಚೇರಿ, ಉಡುಪಿ,ನಾಗರಾಜ್-ಸಿಎಚ್‌ಸಿ 1177, ಕುಂದಾಪುರ ಟೌನ್ ಪಿಎಸ್, ಉಡುಪಿ ,ದೇವರಾಜ್- ಸಿಎಚ್‌ಸಿ 359, ಎಫ್‌ಎಂಎಸ್, ಚಿಕ್ಕಮಗಳೂರು ಇವರನ್ನು ನೇಮಕ ಮಾಡಲಾಗಿದೆ.

Share This Article
Leave a Comment