ಮಂಗಳೂರು: ಜನರ ಹಲವು ವರ್ಷಗಳ ಬೇಡಿಕೆಯ ಜಪ್ಪು ಮಹಾಕಾಳಿಪಡ್ಪು ರೈಲ್ವೆ ಅಂಡರ್ ಪಾಸ್ ನ ಕಾಮಗಾರಿ ಬಹಳ ನಿಧಾನಗತಿಯಲ್ಲಿ ಸಾಗುತ್ತಿದ್ದು ಕೊನೆಗೂ ಅದರ ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ.


ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಅಂಡರ್ ಪಾಸ್ ವಿಡಿಯೋ ಆಗಿತ್ತು, ಅಂಡರ್ ಪಾಸ್ ನ ಕಾಮಗಾರಿ ಸಂಪೂರ್ಣಗೊಂಡಿದ್ದು “ಜನವರಿ 18” ರ ಬಳಿಕ ತೆರೆಯಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ರವರು ಮಾಹಿತಿ ನೀಡಿದ್ದು ಅದರ ಉದ್ಘಾಟನೆ ಜಿಲ್ಲಾ ಸಚಿವರ ವೇಳಾಪಟ್ಟಿಯ ಅನುಸಾರ ದಿನ ನಿಗದಿಯಾಗಲಿದೆ ಅಥವಾ ಜನವರಿ 26 ರಂದು ನಡೆಯಲಿದೆ ಎಂದು ತಿಳಿಸಿದರು. ತದನಂತರ ಕಂಕನಾಡಿ – ಪಂಪ್ವೆಲ್ ರಸ್ತೆ ಮುಚ್ಚಲಿದ್ದು ಅದರ ಕಾಮಗಾರಿ ಶುರುವಾಗಲಿದೆ ಎಂದು ಮಾಹಿತಿ ನೀಡಿದರು.

