ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಮಂಗಳಾ ಆಸ್ಪತ್ರೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಪೋಸ್ಟ್ ಗಳನ್ನ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸುನಿಲ್ ಬಜಿಲಕೇರಿ ಗೆ ರೂ.5 ಲಕ್ಷ ದಂಡ ಹಾಗೂ ಕೇಸ್ ದಾಖಲಾದ ದಿನದಿಂದ ಆದೇಶ ಬಂದ ದಿನದವರೆಗೆ ಶೇಖಡಾ 6% ಬಡ್ಡಿಯೊಂದಿಗೆ ದಂಡ ಪಾವತಿಸಲು ಆದೇಶವನ್ನು ನೀಡಿದೆ.



ಸೆಪ್ಟೆಂಬರ್ 2020 ರ ಕೋವಿಡ್ ಸಂಧರ್ಭದಲ್ಲಿ ರೋಗಿಯೊಬ್ಬರ ಬಿಲ್ ಪಾವತಿಯ ವಿಚಾರದಲ್ಲಿ ಈ ಘಟನೆ ನಡೆದಿದ್ದು ಸುನಿಲ್ ಬಜಿಲಕೇರಿ ಸತತವಾಗಿ ಮಂಗಳ ಆಸ್ಪತ್ರೆಯ ವಿರುದ್ಧ ಫೇಸ್ ಬುಕ್ ನಲ್ಲಿ ಮಾನಹಾನಿಕರ ಪೋಸ್ಟ್ ಗಳನ್ನ ಮಾಡಿದ್ದು ಸತತ ವಿಚಾರಣೆಯ ಬಳಿಕ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಮಂಗಳಾ ಆಸ್ಪತ್ರೆಯ ಪರವಾಗಿ ಖ್ಯಾತ ವಕೀಲ ಚಿದಾನಂದ ಕೆದಿಲಾಯ ವಾದಿಸಿದ್ದರು.
ಸುನೀಲ್ ಬಜಿಲಕೇರಿ ಈ ಹಿಂದೆಯೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಪೋಸ್ಟ್ ಗಳನ್ನ ಮಾಡಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು.



