ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಇರುವಾಗಲೇ ನೇಣಿಗೆ ಶರಣಾದ ತಮಿಳು ನಟಿ ಸುಭಾಷಿಣಿ…!

Prakhara News
1 Min Read

ಚೆನ್ನೈ,: ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ಶ್ರೀಲಂಕಾದವರಾಗಿರುವ ಸುಭಾಷಿಣಿ ಅಲಿಯಾಸ್ ಸಾಸ್ವಿಬಾಲಾ ಅವರು ಹಲವು ಧಾರಾವಾಹಿಗಳಲ್ಲಿ ಪೋಷಕ ನಟಿಯಾಗಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. 2024ರಲ್ಲಿ ಬೆಂಗಳೂರು ಮೂಲದ ಬಿಪಿನ್ ಚಂದ್ರನ್ ಅವರನ್ನು ವಿವಾಹವಾಗಿ, ಅಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ.

ಸಿನಿಮಾ ಚಿತ್ರೀಕರಣದ ಹಿನ್ನೆಲೆ ಚೆನ್ನೈನ ಪೋರೂರು ಬಳಿಯ ಅಯ್ಯಪ್ಪಂತಂಗಲ್‌ನಲ್ಲಿರುವ ಅಪಾರ್ಟ್ಮೆಂಟ್‌ವೊಂನ್ನು ಬಾಡಿಗೆ ಪಡೆದಿದ್ದರು. ಮಾ.3ಕ್ಕೆ ಆ ಮನೆಗೆ ಬಂದಿದ್ದರು. ಪೊಲೀಸರ ಮಾಹಿತಿ ಪ್ರಕಾರ, ಏ.5ರ ರಾತ್ರಿ ತಮ್ಮ ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೂ ಮುನ್ನ ತಮ್ಮ ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದು, ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಿಡಿಯೋ ಕಾಲ್‌ನಲ್ಲಿ ಇರುವಾಗಲೇ ನೇಣಿಗೆ ಶರಣಾಗಿದ್ದಾರೆ. ಕೂಡಲೇ ಅವರ ಪತಿ ಅಪಾರ್ಟ್ಮೆಂಟ್‌ನ ಸಿಬ್ಬಂದಿಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಿಬ್ಬಂದಿ ಪೋರೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಶವವನ್ನು ಕೆಳಗಿಳಿಸಿ, ಸರ್ಕಾರಿ ಆಸ್ಪತ್ರೆಗೆ ರವಾನಿಸಿದರೂ ಕೂಡ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ನಟಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment