ಬೆಂಗಳೂರಿನಲ್ಲಿ ಕಾಲೇಜು ಯುವತಿಯನ್ನು ಗುಪ್ತವಾಗಿ ಪಾರ್ಟಿಗೆ ಕರೆದು ಅವಳಿಗೆ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಇಬ್ಬರನ್ನು ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.


ಈ ಪ್ರಕರಣದಲ್ಲಿ ಸಕಲೇಶಪುರ ಮೂಲದ ನಿಕಿಲ್ ಹಾಗೂ ಆತನಿಗೆ ಕೃತ್ಯ ಎಸಗಲು ಸಹಾಯ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಡಿಕ್ಷನ್ ಸಾಂಡ್ರಾ ಬಂಧಿತ ಆರೋಪಿಗಳಾಗಿದ್ದಾರೆ. ಈ ಪೈಕಿ ನಿಕಿಲ್ ಬಸವೇಶ್ವರ ನಗರದಲ್ಲಿರುವ ಕಾರಿನ ವಾಶಿಂಗ್ ಸೆಂಟರ್ ನಡೆಸುತ್ತಿದ್ದ. ತನ್ನ ಜೊತೆಗಿದ್ದ ಡಿಕ್ಷನ್ ಹಾಗೂ ಇತರ ಸಹಚರರೊಂದಿಗೆ ನಗರದ ಕಾಲೇಜಿನಲ್ಲಿರುವ ಹೋರ ರಾಜ್ಯದ ಯುವತಿಯರನ್ನು ತಮ್ಮತ್ತ ಸೆಳೆಯುವಂತೆ ಸೂಚಿಸಿದ್ದ. ಇವರು ಇನ್‌ಸ್ಟಾಗ್ರಾಮ್ ಮೂಲಕ ಯುವತಿಯರ ಜೊತೆ ಸ್ನೇಹ ಬೆಳೆಸುತ್ತಿದ್ದರು. ನಂತರ ಫೋಟೋ ಶೂಟ್, ಮಾಡೆಲಿಂಗ್ ಅಥವಾ ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದರು.

ಆರಂಭದಲ್ಲಿ ಪಬ್‌ಗಳಲ್ಲಿ ಕೆಪೆಗೆ ಭೇಟಿಯಾಗಿ ಸಭ್ಯರಂತೆ ವರ್ತಿಸುತ್ತಿದ್ದರು. ನಂತರ ಪಾರ್ಟಿ ವೆಚ್ಚವನ್ನು ಭರಿಸುವ ನೆಪದಲ್ಲಿ ಯುವತಿಯರನ್ನು ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಈ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ನಂತರ ಇಬ್ಬರನ್ನು ಬಂಧಿಸಲಾಗಿದೆ. ಕೆಲವರು ಇದಕ್ಕೆ ಒಪ್ಪಿಕೊಂಡಿದ್ದರೆ, ಇನ್ನು ಕೆಲವು ಯುವತಿಯರಿಗೆ ಡ್ರಗ್ ಅನ್ನು ಬಲವಂತವಾಗಿ ನೀಡಿ ಅರೆಪ್ರಜ್ಞಾವಸ್ಥೆಗೆ ಹೋಗುತ್ತಿದ್ದಂತೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಹೇಳಲಾಗಿದೆ.
ಮರುದಿನ ಬೆಳಗ್ಗೆ ಯುವತಿಯರು ಪ್ರಶ್ನಿಸಿದಾಗ, ಕುಡಿದು ನಶೆಯಲ್ಲಿ ಏನಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಆರೋಪಿಗಳು ಸಬೂಬು ಹೇಳಿ ಕಳಹಿಸುತ್ತಿದ್ದರು.

ಆರೋಪಿಗಳ ಕೃತ್ಯಕ್ಕೆ ಒಳಗಾದ ಹಲವು ಯುವತಿಯರು ಮುಜುಗರದಿಂದ ದೂರು ನೀಡಲು ಹಿಂದೇಟು ಹಾಕಿದ್ದರು ಎಂಬ ಆರೋಪ ಕೇಳಿ ಬಂದಿದೆ.
19 ಯುವತಿಯರ ಮೇಲೆ ದೌರ್ಜನ್ಯ ಆರೋಪಿಗಳು 19 ಮಂದಿ ಯುವತಿಯರಿಗೆ ಇದೇ ರೀತಿ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಇದೀಗ, ಕೃತ್ಯ ನಡೆದಿದೆ ಎನ್ನಲಾದ ವಿಲ್ಲಾದ cctv ಡಿವೈಡರ್, ಆರೋಪಿಗಳ ಮೊಬೈಲ್ ಗಳನ್ನು ಜಪ್ತಿ ಮಾಡಿ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕೆಲವರ ಹೇಳಿಕೆಗಳನ್ನ ಪಡೆದಲಾಗುತ್ತಿದೆ.
ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ವ್ಯಕ್ತಿ ಆರೋಪಿ ಡಿಕ್ಸನ್. ಆಕೆ ಯುವತಿಯೊಬ್ಬಳಿಗೆ ಆರೋಪಿ ಡಿಕ್ಸನ್ ಪ್ರೀತಿಸುವ ನೆಪದಲ್ಲಿ ಸಂಪರ್ಕಿಸಿ ಆಕೆಯ ವಿಶ್ವಾಸ ಗಳಿಸಿದ್ದ. ನಂತರ ಪಾರ್ಟಿಗೆ ಕರೆದುಕೊಂಡು ಹೋಗಿ ತನ್ನ ಜೊತೆಗೆ ಸಹಕರಿಸುವಂತೆ ಕೇಳಿದ. ಇದಕ್ಕೆ ನಿರಾಕರಿಸಿದಾಗ, ಡ್ರಗ್ ನೀಡಿ ಬಲವಂತವಾಗಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ.
ಸಂತ್ರಸ್ತ ಯುವತಿ ದೂರು ನೀಡುವ ಮುನ್ನ, ಆಕೆ ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಆಕೆಯ ವಿರುದ್ಧವೇ ಆರೋಪಿ ನಿಖಿಲ್ ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದ. ಈ ಮೂಲಕ ಯುವತಯೇ ತಪ್ಪಿತಸ್ಥೆ ಎಂದು ಬಿಂಬಿಸಲು ಮುಂದಾಗಿದ್ದ ಎನ್ನಲಾಗಿದೆ. ಇತ್ತ ಸಂತ್ರಸ್ತ ಯುವತಿ ನೀಡಿದ್ದ ದೂರಿನ ಆಧಾರದ ಮೇಲೆ ಅಮೃತಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರಕರಣದ ಬಗ್ಗೆ ಸೂಕ್ತವಾಗಿ ಮಾಹಿತಿ ಸಿಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



