ಬೆಂಗಳೂರು : 16 ನೇ ಮಹಡಿಯಿಂದ ಬಿದ್ದು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಂಗಳೂರು ಮೂಲದ ಯುವಕ ಸಾವು.

Prakhara News
1 Min Read

ಬೆಂಗಳೂರು : 16 ನೇ ಮಹಡಿಯಿಂದ ಬಿದ್ದು (ಸ್ಕಿಜೋಫ್ರೆನಿಯಾ)ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಂಗಳೂರು ಮೂಲದ ಯುವಕ ಮೃತಪಟ್ಟ ಘಟನೆ ಬೆಂಗಳೂರಿನ ಶೆಟ್ಟಿಹಳ್ಳಿ ಪ್ರಿನ್ಸ್ ಟೌನ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.

ಮಂಗಳೂರು ಮೂಲದ ಕಿಶೋರ್ ಮತ್ತು ಜಯಶ್ರೀ ದಂಪತಿಗಳ ಪುತ್ರ ನಿಕ್ಷೇಪ್ (26) ಸ್ಥಳದಲ್ಲೇ ಸಾವನಪ್ಪಿದ ಯುವಕ.ಯೂರೋಪ್ನಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಮುಗಿಸಿ ಬಂದಿದ್ದ ಈತ
ಇತ್ತೀಚೆಗೆ ತಂದೆಯ ಮೇಲೂ ಅಟ್ಯಾಕ್ ಮಾಡಿದ್ದ ಅರೋಪ ಕೇಳಿಬಂದಿತ್ತು
ಕಳೆದೆರಡು ದಿನದಿಂದ ಹೆಸರಘಟ್ಟದ ಗೌಡಿಯ ಮಠದಲ್ಲಿದ್ದ ಮೃತ ನಿಕ್ಷೇಪ್,
ಇಂದು ಅಪಾರ್ಟ್ಮೆಂಟ್ಗೆ ಬಂದಿದ್ದು, ಮನೆಗೆ ಬಾರದೆ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಪಾರ್ಟ್ಮೆಂಟ್ ನಿವಾಸಿಗಳಿಂದ ಘಟನೆ ಬೆಳಕಿಗೆ ಬಂದಿದ್ದು ಘಟನಾಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment