ವೀರಕಂಬ: ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಪೂರ್ತಿ ಬೆಂಕಿಗೆ ಆಹುತಿಯಾಗಿದ್ದ ಮಹಿಳೆಗೆ ನೆರವಾದ ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ (ರಿ)

Prakhara News
1 Min Read

ಬಂಟ್ವಾಳ: ಇತ್ತೀಚೆಗೆ ಕಲ್ಲಡ್ಕ ಕೊಳ್ತಮಜಲ್ ಗ್ರಾಮದ
ವೀರಕಂಬ ಗಣೇಶ್ ಕೊಡಿ ನಿವಾಸಿ ಶ್ರೀಮತಿ ರಾಜೇಶ್ವರಿಯವರ ಮನೆ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ತನ್ನಿಂದಾಗುವ ಸಹಾಯ ಮಾಡುವ ನಿಟ್ಟಿನಲ್ಲಿ ಉದಯ ಪೂಜಾರಿ ಸ್ಥಾಪಕಧ್ಯಕ್ಷತೆಯ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ (ರಿ) ಸಂಘಟನೆಯ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ವತಿಯಿಂದ 51ನೇ ಸೇವಾ ಯೋಜನೆಯ ಧನಸಹಾಯ ಮೊತ್ತ ರೂ.20,000 ವನ್ನು ಸೌರಭ್ ಕೊಟ್ಟಾರಿ ಬೋಳಾರ ಇವರು ನೀಡಿದರು.

ಈ ಸಂಧರ್ಭ ಘಟಕದ ಅಧ್ಯಕ್ಷರು ರಾಜೇಶ್ ಕೋಟ್ಯಾನ್, ಬಿರುವೆರ್ ಕುಡ್ಲ ಸಂಘಟನೆಯ ಅಭಿಮಾನಿಗಳಾದ ಪ್ರಶಾಂತ್ ಗುರುಪುರ,
ರೋಹಿತ್ ಪೂಜಾರಿ ಕಿನ್ಯ,ನಿಶಾಂತ್ ರೈ ಸುಳ್ಯ,
ಸಂದೇಶ್ ಶೆಟ್ಟಿ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment