ಧರ್ಮಸ್ಥಳ ಪ್ರಕರಣ: SIT ಯಿಂದ ಮತ್ತೊಂದು ಅಸ್ಥಿಪಂಜರದ ಗುರುತು ಪತ್ತೆ

Prakhara News
1 Min Read

ಧರ್ಮಸ್ಥಳ: 7 ಬುರುಡೆಗಳು ಪತ್ತೆಯಾದ ಪ್ರಕರಣದಲ್ಲಿ ಎರಡನೇ ಬುರುಡೆಯು ಕೂಡ ಗಂಡಸಿನದು. ಅದು ತುಮಕೂರು ಜಿಲ್ಲೆಯ ಯುವಕನದ್ದು ಎಂಬುದು ವಿಚಾರಣೆ ವೇಳೆ ಪತ್ತೆಯಾಗಿದೆ.

2013 Oct 2 ರಂದು ಬೆಂಗಳೂರು ಬಾರ್ ಕೆಲಸಕ್ಕೆ ಹೋಗುತ್ತಿದ್ದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಬೋಜಪ್ಪ ಮತ್ತು ಚೆನ್ನಮ್ಮ ಮೂರನೇ ಮಗ ಆದಿಶೇಷ ನಾರಾಯಣ(27) ಯುವಕ ಮನೆಗೆ ಬಂದು ಮೊಬೈಲ್ ಇಟ್ಟು ಮನೆಬಿಟ್ಟು ನಾಪತ್ತೆಯಾಗಿದ್ದವನ ಅಸ್ಥಿಪಂಜರ. ಇದನ್ನು ಆತನ ಡ್ರೈವಿಂಗ್ ಲೈಸೆನ್ಸ್ ಕಾರ್ಡ್ ಮೂಲಕ ಪತ್ತೆಹಚ್ಚಲಾಗಿದೆ.

ಆದಿಶೇಷನ ಕುಟುಂಬ ಸದಸ್ಯರು ಸೆ.25 ರಂದು ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಬಂದು ಡ್ರೈವಿಂಗ್ ಲೈಸೆನ್ಸ್ ಮತ್ತು ಫೋಟೋ ಮೂಲಕ ಖಚಿತ ಪಡಿಸಿಕೊಂಡು ನಾಪತ್ತೆ ಬಗ್ಗೆ ಮಾಹಿತಿ‌ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಡಿ.ಎನ್.ಎ ಮಾಡಿಸಿದ ಬಳಿಕ ಅಧಿಕೃತ ವಾಗಲಿದೆ. ಈ ಮಾಹಿತಿಯನ್ನು ಆದಿಶೇಷ ಅಕ್ಕ ಪದ್ಮ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Share This Article
Leave a Comment