ಮಂಗಳೂರು: ನಗರದ ಕೊಡಿಯಾಲಬೈಲ್ ಬಳಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬರ್ಕೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.


ಅಶೋಕನಗರ ನಿವಾಸಿ ಅಥರ್ವ ನಾಯ್ಕ್ (21) ಮತ್ತು ಮಣ್ಣಗುಡ್ಡೆ ನಿವಾಸಿ ಪ್ರಥಮ್ ಪಿ. ಶೆಣೈ (22) ಬಂಧಿತ ಆರೋಪಿಗಳು.
ಕೊಡಿಯಾಲಬೈಲು ಬಳಿ ಅಮಲಿನಲ್ಲಿದ್ದಂತೆ ಕಂಡು ಬಂದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವ ಶಂಕೆ ವ್ಯಕ್ತವಾಯಿತು. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

