ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ಧತೆಗೆ ದಕ್ಕೆಯಾಗುವಂತಹ ಸಂದೇಶ-FIR ದಾಖಲು

Prakhara News
1 Min Read

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ಧತೆಗೆ ದಕ್ಕೆಯಾಗುವಂತಹ ಸಂದೇಶವನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ, ಅಬ್ದುಲ್ ಕೆ. ಎಂಬ ಹೆಸರಿನ ಖಾತೆಯನ್ನು ಹೊಂದಿರುವ ವ್ಯಕ್ತಿಯು, ಕೋಮು ಸೌಹಾರ್ಧತೆಗೆ ದಕ್ಕೆಯಾಗುವಂತಹ ಹಾಗೂ ಅನ್ಯ ಸಮುದಾಯದ ವಿರುದ್ಧ ಅವಹೇಳನಕಾರಿ ಸಂದೇಶವನ್ನು ಸದ್ರಿ ಫೇಸ್ಬುಕ್ ಖಾತೆಯಲ್ಲಿ ಪ್ರಸಾರ ಮಾಡಿರುವುದು ದಿನಾಂಕ: 04-08-2025 ರಂದು ಕಂಡುಬಂದಿರುತ್ತದೆ.

‌ಸದ್ರಿ ಫೆಸ್ಬುಕ್ ಸಂದೇಶದಿಂದ ವಿಭಿನ್ನ ಕೋಮುಗಳ ನಡುವೆ ದ್ವೇಷ ಮೂಡಿ, ಸಾರ್ವಜನಿಕ ಶಾಂತಿ ನೆಮ್ಮದಿಗೆ ದಕ್ಕೆಯಾಗುವ ಸಾದ್ಯತೆ ಇರುವುದರಿಂದ, ಈ ಫೇಸ್ಬುಕ್ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 67/2025, ಕಲಂ: 196(1) (a) 353(2)BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

Share This Article
Leave a Comment