ಪುತ್ತೂರು: ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲಗಳ ಬಿಜೆಪಿ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ಪುತ್ತೂರಿನ ಪಕ್ಷದ ಕಚೇರಿಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಪ್ರಕೋಷ್ಠದ ಸಂಚಾಲಕರಾದ ಶ್ರೀಧರ ಶೆಟ್ಟಿ ಪುಳಿಂಚ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ ಅವಧಿಯಲ್ಲಿ ಜಿಲ್ಲಾ ಕಾನೂನು ಪ್ರಕೋಷ್ಠವು ನಡೆಸಿದ ವಿವಿಧ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.

ಜಿಲ್ಲಾ ಕಾನೂನು ಪ್ರಕೋಷ್ಠದ ಸಹ ಸಂಚಾಲಕರಾದ ಶ್ರೀ ಪ್ರಮೋದ್ ಪೂಜಾರಿ ಕೆರ್ವಾಶೆ ಅವರು ಮಾತನಾಡಿ, ಪಕ್ಷದ ಸಂಘಟನೆಯಲ್ಲಿ ಕಾನೂನು ಪ್ರಕೋಷ್ಠದ ಅವಶ್ಯಕತೆ ಮತ್ತು ಮಹತ್ವವನ್ನು ವಿವರಿಸಿದರು. ಪುತ್ತೂರು ಮಂಡಲದ ಅಧ್ಯಕ್ಷರಾದ ಶ್ರೀ ದಯಾನಂದ ಉಜಿರೆಮಾರ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಿಬೆಳೆಸುವಲ್ಲಿ ಕಾನೂನು ಪ್ರಕೋಷ್ಠದ ಸಂಪೂರ್ಣ ಸಹಕಾರವನ್ನು ಕೋರಿದರು.

ಬಿಜೆಪಿ ನಾಯಕರಾದ ಶ್ರೀ ಗೋಪಾಲಕೃಷ್ಣ ಹೇರಳೆಯವರು ಸಾಂದರ್ಭಿಕವಾಗಿ ಮಾತನಾಡಿ, ಹಿಂದಿನ ಅವಧಿಗಳಲ್ಲಿ ಕಾನೂನು ಪ್ರಕೋಷ್ಠವು ಸಲ್ಲಿಸಿದ ಸೇವೆ ಮತ್ತು ಕೊಡುಗೆಗಳನ್ನು ಸ್ಮರಿಸಿ ಪ್ರಸ್ತುತ ಕಾನೂನು ಪ್ರಕೋಷ್ಠಕ್ಕೆ ಶುಭ ಹಾರೈಸಿದರು.


ಪುತ್ತೂರು ನಗರ ಮಂಡಲ ಕಾನೂನು ಪ್ರಕೋಷ್ಠದ ಸಂಚಾಲಕರಾಗಿ ನಾಗರಾಜ್ ಯು.ಎನ್, ಸಹ ಸಂಚಾಲಕರಾಗಿ ರವೀಂದ್ರ ರೈ,ಸದಸ್ಯರಾಗಿ ಕೃಷ್ಣಪ್ಪ ಗೌಡ ಕಕ್ವೆ , ವಿವೇಕಾನಂದ ಕೆ.ಎಸ್., ಸಂಧ್ಯಾಲಕ್ಷ್ಮಿ, ಅರ್ಚನಾ ಬಿ.ಕೆ., ತೇಜಸ್ವಿ ಕೊಂಬೆಟ್ಟು.
ಪುತ್ತೂರು ಗ್ರಾಮಾಂತರ ಮಂಡಲ ಕಾನೂನು ಪ್ರಕೋಷ್ಠದ ಸಂಚಾಲಕರಾಗಿ ಡಿ. ಶಂಭು ಭಟ್, ಸಹ ಸಂಚಾಲಕರಾಗಿ ಗೋವಿಂದರಾಜ್ ಕುಂಡಡ್ಕ, ಸದಸ್ಯರಾಗಿ ಮಂಜುನಾಥ್ ಎನ್.ಎಸ್., ಮಹಾಬಲ ಶೆಟ್ಟಿ ಕೆ., ಪ್ರದೀಪ್ ಸೂರ್ಯ ಇಡ್ಕಿದು, ಶ್ರೀಕಾಂತ್ ಈಶ್ವರಮಂಗಿಲ, ಪ್ರದೀಪ್ ಅಳಿಕೆ ಆಯ್ಕೆಯಾದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಪುತ್ತೂರು ನಗರ ಮಂಡಲದ ಅಧ್ಯಕ್ಷರಾದ ಶ್ರೀ ಶಿವ ಕುಮಾರ್, ಜಿಲ್ಲಾ ಲೀಗಲ್ ಸೆಲ್ ಸದಸ್ಯ ಸಂದೀಪ್ ವಳಲಂಬೆ, ಓಬಿಸಿ ಮೋರ್ಚಾದ ನಿರಂಜನ್ ಮಾನ್ಯ, ನಾಯಕರಾದ ನಾಗೇಂದ್ರ ಬಾಳಿಗ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಸುನೀಲ್ ದಡ್ಡು ಕಾರ್ಯಕ್ರಮ ನಿರ್ವಹಿಸಿದರು. ಪುತ್ತೂರು ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಶಶಿಧರ ನಾಯಕ್ ವಂದಿಸಿದರು.



