ವಿಟ್ಲ: ಆರ್ಥಿಕ ಮುಗ್ಗಟ್ಟು; ಟಿಪ್ಪರ್ ಚಾಲಕ ನೇಣಿಗೆ ಶರಣು..!

Prakhara News
1 Min Read

ವಿಟ್ಲ: ಬಡ್ಡಿಗೆ ಪಡೆದ ಸಾಲ ತೀರಿಸಲಾಗದೆ ಆರ್ಥಿಕ ಮುಗ್ಗಟ್ಟಿನಿಂದ ನೊಂದುಕೊಂಡಿದ್ದ ಟಿಪ್ಪರ್ ಚಾಲಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೇಪು ಗ್ರಾಮದ ನೀರ್ಕಜೆ ನಿವಾಸಿ ಹರೀಶ್ಚಂದ್ರ ಬೆಳ್ಳಡ ಅವರ ಮಗ ದಿನೇಶ್ (35) ದುರ್ದೈವಿ. ಉಕ್ಕುಡ ಸೂರಜ್ ಅವರ ಗಜಾನನ ಟಿಪ್ಪರ್ ಲಾರಿಯಲ್ಲಿ ದಿನೇಶ್ ಬಹಳ ಸಮಯದಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ಬಡ್ಡಿಗೆ ಹಣ ಪಡೆದು ಅದನ್ನು ಕಟ್ಟಲಾಗದೆ, ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲಾಗದೆ ಅವರು ತೀವ್ರವಾಗಿ ನೊಂದುಕೊಂಡಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ.

ಮೃತ ದಿನೇಶ್ ಅವರಿಗೆ ಎರಡು ವರ್ಷಗಳ ಹಿಂದೆ ವಿಚ್ಛೇದನವಾಗಿದ್ದ ಮಹಿಳೆಯ ಜತೆ ಮದುವೆಯಾಗಿದ್ದು, ಹಿಂದಿನ ವಿವಾಹದ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿವೆ. ಅಲ್ಲದೆ, ಪ್ರಸ್ತುತ ಪತ್ನಿಯೊಂದಿಗೆ ‘ನಮಸ್ವಿ’ ಎಂಬ ಒಂದು ವರ್ಷದ ಹಸುಗೂಸಿದೆ. ಮೇಲ್ನೋಟಕ್ಕೆ ಅವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬುದು ತಿಳಿದುಬಂದಿದೆ.
ಮೃತರು ಪತ್ನಿ ರಂಜಿತಾ, ಒಂದು ವರ್ಷದ ಮಗು ನಮಸ್ವಿ ಹಾಗೂ ತಂದೆ, ತಂಗಿ ಮತ್ತು ತಮ್ಮನನ್ನು ಅಗಲಿದ್ದಾರೆ.

Share This Article
Leave a Comment