ಬೆಂಗಳೂರು: 2 ಮಕ್ಕಳ ತಾಯಿ ಹಿಂದೆ ಬಿದ್ದ ಟ್ಯಾಟೂ ಘೋಸ್ಟ್ – ಮದುವೆಯಾಗುವುದಾಗಿ ಲಕ್ಷ ಲಕ್ಷ ವಂಚನೆ ಆರೋಪ..!

Prakhara News
1 Min Read

ಬೆಂಗಳೂರು: ನಗರದ ಬ್ಯಾಡರಹಳ್ಳಿಯಲ್ಲಿ ಮದುವೆಯಾಗುವುದಾಗಿ ನಂಬಿಸಿ ಟ್ಯಾಟೂ ಆರ್ಟಿಸ್ಟ್ ಕಮ್ ನಟನಿಂದ ಮಹಿಳೆ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ.

ಪರಪುರುಷನ ಜೊತೆ ವೀಡಿಯೋ ಕಾಲ್‌ನಲ್ಲಿದ್ದಾಗ ಮಹಿಳೆ ರೆಡ್ ಹ್ಯಾಂಡಾಗಿ ಲಾಕ್ ಆಗಿದ್ದಾಳೆ. ಇದನ್ನು ಪ್ರಶ್ನೆ ಮಾಡಿದ ಪ್ರಖ್ಯಾತ ಘೋಸ್ಟ್ ಟ್ಯಾಟೂ ಆರ್ಟಿಸ್ಟ್ ಖ್ಯಾತಿಯ ಅರ್ಜುನ್ ಮೇಲೆ ರಾಡಿನಿಂದ ಹಲ್ಲೆ ಮಾಡಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಟ್ಯಾಟೂ ಸ್ಟುಡಿಯೋದಲ್ಲಿ ಸಂಪ್ರಿತಾ ಎಂಬ ಮಹಿಳೆಯ ಪರಿಚಯವಾಗಿತ್ತು. ಸಂಪ್ರಿತಾಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಆದರೆ ಗಂಡ ಕಾರಣಾಂತರಗಳಿಂದ ಮೃತಪಟ್ಟಿದ್ದಾಗಿ ಟ್ಯಾಟೂ ಘೋಸ್ಟ್ ಅರ್ಜುನ್ ಪರಿಚಯ ಮಾಡಿಕೊಂಡಿದ್ದಳು.

ಪರಿಚಯ ಇಬ್ಬರ ನಡುವೆ ಪ್ರೀತಿಗೆ ತಿರುಗಿತ್ತು. ನಂತರ ಅರ್ಜುನ್‌ಗೆ ಪತ್ನಿಯೊಂದಿಗೆ ವಿಚ್ಛೇದನ ಆಗಿತ್ತು. ಈ ವೇಳೆ ಅರ್ಜುನ್ ಬಳಿ ಮದುವೆಯಾಗುವುದಾಗಿ ಸಂಪ್ರಿತ ಹೇಳಿದ್ದಳು. ಮಹಿಳೆ ನಂಬಿ ಟ್ಯಾಟೂ ಘೋಸ್ಟ್ ಅರ್ಜುನ್ ಹಲವು ಬಾರಿ ಹಣ ಕೊಟ್ಟಿದ್ದ. ಆದರೆ ನಾಳೆ, ನಾಡಿದ್ದು ಅಂತ ಸಂಪ್ರಿತಾ ಕಳೆದ ಒಂದು ವರ್ಷದಿಂದ ಮದುವೆ ಮುಂದೂಡಿದ್ದಳು. ಸೆ 2.ರಂದು ಅರ್ಜುನ್ ಸಂಪ್ರಿತಾಗೆ ಕರೆ ಮಾಡಿದ್ದ. ಕರೆ ಸ್ವೀಕರಿಸದ ಹಿನ್ನೆಲೆ ಮನೆ ಬಳಿ ತೆರಳಿದ್ದ. ಈ ವೇಳೆ ಸಂಪ್ರಿತಾ ಪರಪುರುಷನ ಜೊತೆ ಅಶ್ಲೀಲವಾಗಿ ಮಾತನಾಡುತ್ತಿದ್ದಳು. ಪ್ರಶ್ನೆ ಮಾಡಿದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಕಬ್ಬಿಣದ ರಾಡಿನಿಂದ ಅರ್ಜುನ್‌ಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಅರ್ಜುನ್ ಅಪಘಾತ ಅಂತ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿದ್ದರು. ಮರ್ಯಾದೆಗೆ ಅಂಜಿ ಅಪಘಾತ ಎಂದು ಅರ್ಜುನ್ ವೀಡಿಯೋ ಮಾಡಿದ್ದರು. ಅರ್ಜುನ್ ಇತ್ತೀಚೆಗೆ ಸಿನಿಮಾಗಳಲ್ಲೂ ನಟನೆಗೆ ಅವಕಾಶ ಸಿಕ್ಕಿತ್ತು. ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಒಂದು ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

Share This Article
Leave a Comment