ಹೊಸದಿಲ್ಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಉಗ್ರರು ಗುಂಡಿಕ್ಕಿ ಸಾಯಿಸಿದ ಬೆನ್ನಿಗೆ ಸೇನೆ ಇಬ್ಬರು ಉಗ್ರರನ್ನು ಗಡಿ ರೇಖೆಯ ಬಳಿ ಸಾಯಿಸಿದೆ. ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ನುಸುಳಿಕೊಂಡು ಬರಲು ಯತ್ನಿಸಿದ್ದ ಉಗ್ರರನ್ನು ಸೇನೆ ಸಾಯಿಸಿದೆ.



ಭಾರಿ ಗುಂಡಿನ ಕಾಳಗದ ಬಳಿಕ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಉಗ್ರರಿಂದ ಅಪಾರ ಪ್ರಮಾಣದ ಮದ್ದುಗುಂಡು, ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾರಾಮುಲ್ಲಾದ ಉರಿನಾಲಾದ ಸರ್ಜೀವನ್ ಎಂಬ ಪ್ರದೇಶದಿಂದ ಮೂವರು ಉಗ್ರರು ಒಳನುಸುಳಲು ಯುತ್ನಿಸಿದ್ದರು.


ಓರ್ವ ಉಗ್ರ ಪಲಾಯನ ಮಾಡಿದ್ದು, ಇಬ್ಬರು ಬಲಿಯಾಗಿದ್ದಾರೆ.