Home ಕರಾವಳಿ ಮಂಗಳೂರಿಗೆ ವಾಟರ್ ಮೆಟ್ರೋ..!! ಏನಿದು ವಾಟರ್ ಮೆಟ್ರೋ?

ಮಂಗಳೂರಿಗೆ ವಾಟರ್ ಮೆಟ್ರೋ..!! ಏನಿದು ವಾಟರ್ ಮೆಟ್ರೋ?

0
ರಾಜ್ಯ ಬಜೆಟ್‌ನಲ್ಲಿ ಕರಾವಳಿಗೆ ಅನೇಕ ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ. ಕರ್ನಾಟಕದ ಮೊದಲ “ವಾಟರ್ ಮೆಟ್ರೋ” ಯೋಜನೆಯನ್ನು ಮಂಗಳೂರಿನಲ್ಲಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ.ಮಂಗಳೂರಿಗೆ ಅಂತರಾಷ್ಟ್ರೀಯ ಕ್ರೂಸ್ ಯೋಜನೆ ಮತ್ತು ಕೋಸ್ಟಲ್ ಬರ್ತ್ ಯೋಜನೆ ಕೂಡ ಘೋಷಣೆಗೊಂಡಿದ್ದು, ಇದು ಸಮುದ್ರ ಮತ್ತು ಜಲಮಾರ್ಗಗಳಲ್ಲಿ ಸರಕು-ಪ್ರಯಾಣಿಕರ ಚಲನೆಯನ್ನು ಉತ್ತೇಜಿಸುತ್ತದೆ.ಹೊನ್ನಾವರ ಹಾಗೂ ಮಂಕಿಯಲ್ಲಿ ಬಂದರು ನಿರ್ಮಾಣ, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕೇಂದ್ರ, ಮತ್ತು ನದಿ ಕ್ರೂಸ್ ಪ್ರವಾಸೋದ್ಯಮ ವಿಸ್ತರಣೆಗೆ ಯೋಜನೆ ಸಿದ್ಧವಾಗಿದೆ.ಏನಿದು ವಾಟರ್ ಮೆಟ್ರೋ? ಎಲೆಕ್ಟ್ರಿಕ್-ಹೈಬ್ರಿಡ್ ಫೆರಿಗಳನ್ನು ಬಳಸಿ ಸಮುದ್ರದ ಮಧ್ಯೆ ಸಂಪರ್ಕ ಕಲ್ಪಿಸುವ ಸರಕಾರಿ ಯೋಜನೆಯೇ ವಾಟರ್ ಮೆಟ್ರೋ. ಇದು ಕರಾವಳಿಯ ಜಲಸಾರಿಗೆ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ಕಾರಣವಾಗಲಿದೆ. 

LEAVE A REPLY

Please enter your comment!
Please enter your name here