
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ನಲ್ಲಿ ಹೊಸ ಮೆಡಿಕಲ್ ಕಾಲೇಜ್ ಸ್ಥಾಪಿಸಲಾಗುವುದೆಂದು ಘೋಷಿಸುತ್ತಲೆ ಪುತ್ತೂರಿಗರ ಹರ್ಷಕ್ಕೆ ಎಲ್ಲೆ ಇಲ್ಲದಂತಾಗಿದೆ. ಇಂದಿನ ಬಜೆಟ್ ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮೆಡಿಕಲ್ ಕಾಲೇಜ್ ಹೋರಾಟ ಸಮಿತಿಯ ಪದಾಧಿಕಾರಿಗಳು ಬೆಂಗಳೂರಿಗೆ ತೆರಳಿದ್ದರು. ಅವರ ಜತೆ ಬ್ಯಾಂಡ್ ವಾದನದ ತಂಡವು ತೆರಳಿತ್ತು.



ಬಜೆಟ್ ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆಯಾಗುತ್ತಲೇ, ಪುತ್ತೂರಿನಿಂದ ತೆರಳಿದ ನೂರಾರು ಮಂದಿ ವಿಧಾನ ಸೌಧದ ಮುಂಭಾಗ ಕುಣಿದು ಕುಪ್ಪಳಿಸಿದರು. ಇದೆ ವೇಳೆ ಶಾಸಕ ಅಶೋಕ್ ರೈಯವರು ವಿಧಾನ ಸಭೆಯಿಂದ ಹೊರಗೆ ಬಂದಿದ್ದು ಈ ವೇಳೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.


ಅಶೋಕ್ ರೈವರನ್ನು ಹೆಗಲ ಮೇಲೆ ಹೊತ್ತು ಕಾರ್ಯಕರ್ತರು ಮುಖಂಡರು ಸಂಭ್ರಮಿಸಿದರು. ಅವರ ಜತೆ ಅಶೋಕ್ ರೈವರು ಬ್ಯಾಂಡ್ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹೋರಾಟ ಸಮಿತಿಯ ಅಮಳ ರಾಮಚಂದ್ರ, ಕಾಂಗ್ರೆಸ್ ಮುಖಂಡರಾದ ಶಿವರಾಮ ಆಳ್ವ ಎಂ ಎಸ್ ಮಹಮ್ಮದ್, ಕಾವು ಹೇಮಾನಾಥ ಶೆಟ್ಟಿ, ಕೃಷ್ಣ ಪ್ರಸಾದ್ ಆಳ್ವ ಮುಂತಾದವರು ಉಪಸ್ಥಿತರಿದ್ದರು
ಬಜೆಟ್ ನಲ್ಲಿ ಏನಿದೆ ?
ಪುತ್ತೂರಿನಲ್ಲಿ ಹೊಸ ಮೆಡಿಕಲ್ ಕಾಲೇಜ್ ಸ್ಥಾಪಿಸಲು ಉದ್ಧೇಶಿಸಲಾಗಿದೆ. ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮಾರ್ಥ್ಯದ ತಾಲೂಕು ಆಸ್ಫತ್ರೆಯನ್ನು ಉನ್ನತಿಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮ ವಹಿಸಲಾಗುವುದು ಎಂದು ಸಿದ್ದರಾಮಯ್ಯನವರು ಬಜೆಟ್ ನಲ್ಲಿ ಘೋಷಿಸಿದರು