Home ಕರಾವಳಿ ಮಂಗಳೂರು : ಪಾರ್ಕಿಂಗ್ ಮಾಡಿದ್ದ ಬೈಕ್ ಕಳವುಗೈಯುತ್ತಿದ್ದ ಖತರ್ನಾಕ್ ಕಳ್ಳ ಅರೆಸ್ಟ್

ಮಂಗಳೂರು : ಪಾರ್ಕಿಂಗ್ ಮಾಡಿದ್ದ ಬೈಕ್ ಕಳವುಗೈಯುತ್ತಿದ್ದ ಖತರ್ನಾಕ್ ಕಳ್ಳ ಅರೆಸ್ಟ್

0

ಮಂಗಳೂರು : ಮಂಗಳೂರು ನಗರದಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಂಕನಾಡಿ ರೈಲ್ವೇಸ್ಟೇಷನ್, ಮಾಲ್‌ಗಳು ಹಾಗೂ ಕಂಬಳ ಜಾತ್ರೆ ನಡೆಯುವ ಪ್ರದೇಶದಿಂದ ಬೈಕ್ ಕದಿಯುತ್ತಿದ್ದ ಮಣಿಕಂಠ ಎಂಬ ಖದೀಮನನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕಳ್ಳತನ ಪ್ರಕರಣ ನಿರಂತರವಾಗಿ ದಾಖಲಾಗುತ್ತಿದ್ದರೂ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಿರಲಿಲ್ಲ. ಇದೀಗ ಪ್ರಕರಣವೊಂದರ ತನಿಖೆ ನಡೆಸಿದ ಕಂಕನಾಡಿ ಪೊಲೀಸರು ಮೂಡುಬಿದಿರೆಯಲ್ಲಿ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠ ಎಂಬಾತ ಆರೋಪಿಯಾಗಿದ್ದಾನೆ. ಈತ ಶಿವಮೊಗ್ಗ ಮೂಲದವನಾಗಿದ್ದು, ಮೂಡುಬಿದ್ರೆಯಲ್ಲಿ ಗ್ಯಾರೇಜ್ ಕೆಲಸ ಮಾಡುತ್ತ ಬೈಕ್ ಕಳ್ಳತನ ಕೂಡ ಮಾಡುತ್ತಿದ್ದ.

ಇದನ್ನೂ ಓದಿ : ಐಷಾರಾಮಿ ಡಾಡ್ಜ್ ಕಾರಿನಲ್ಲಿ ಮಣಿಪಾಲಕ್ಕೆ ಬಂದಿದ್ದ ದುಬೈ ಯುವಕರಿಗೆ ಬಿತ್ತು ಫೈನ್ ಇದೀಗ ಆರೋಪಿಯ ಬಂಧನವಾಗಿದ್ದು ಆರೋಪಿಯಿಂದ ಸುಮಾರು 20 ಬೈಕ್‌ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here