Home ದೇಶ ಶಾಲೆಗಳಲ್ಲಿ ಸ್ಮಾರ್ಟ್ಫೋನ್ ನಿಷೇಧ..!

ಶಾಲೆಗಳಲ್ಲಿ ಸ್ಮಾರ್ಟ್ಫೋನ್ ನಿಷೇಧ..!

0

ನವದೆಹಲಿ : ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿರುವ ಸ್ಮಾರ್ಟ್ಫೋನ್‌ಗಳನ್ನು ಈಗಾಗಲೇ ಹಲವು ದೇಶಗಳು ನಿಷೇಧ ವಿಧಿಸಿದೆ.

ಸ್ಮಾರ್ಟ್ಫೋನ್ ಬಳಕೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ, ಏಕಾಗ್ರತೆ ಹಾಗೂ ಭದ್ರತೆಗೆ ತೊಡಕುಂಟಾಗುತ್ತಿದ್ದ ಹಿನ್ನೆಲೆಯಲ್ಲಿ 2024ರ ವೇಳೆಗೆ ವಿಶ್ವದ ಸುಮಾರು 79 ದೇಶಗಳು, ಮಕ್ಕಳು ಶಾಲೆಗಳಲ್ಲಿ ಸ್ಮಾರ್ಟ್ಫೋನ್ ಬಳಸದಂತೆ ನಿರ್ಬಂಧ ಹೇರಿವೆ.
ವಾಸ್ತವವಾಗಿ, ಮೊಬೈಲ್ ಬಳಕೆ ಎಂಬುದು ವ್ಯಸನಕಾರಿಯಾಗಿದೆ. ಇದು ಅತಿಯಾದರೆ ಮಕ್ಕಳ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಜಿಇಎಂ ವರದಿ ಪ್ರಕಾರ, ಡಿಜಿಟಲ್ ವ್ಯಸನದಿಂದ ಮಕ್ಕಳನ್ನು ದೂರ ಇರಿಸುವ ನಿಟ್ಟಿನಲ್ಲಿ 2023ರಲ್ಲೇ 60 ದೇಶಗಳು ವಿವಿಧ ರೀತಿಯ ಕ್ರಮ, ನಿರ್ಬಂಧಗಳನ್ನು ವಿಧಿಸಿವೆ. 2024ರಲ್ಲಿ ಇನ್ನೂ 19 ರಾಷ್ಟ್ರಗಳು ಈ ಪಟ್ಟಿಗೆ ಸೇರ್ಪಡೆಗೊಂಡಿವೆ. ಹೀಗಾಗಿ ಶೇ.40ರಷ್ಟು ಮಕ್ಕಳನ್ನು ಮೊಬೈಲ್‌ನಿಂದ ದೂರ ಇರಿಸಲು ಹೆಜ್ಜೆ ಇಟ್ಟಂತಾಗಿದೆ. ಇನ್ನು ಭಾರತದ ಶಾಲೆಗಳಲ್ಲಿ ಯಾವುದೇ ನಿರ್ದಿಷ್ಟ ಕಾನೂನು ಇಲ್ಲವಾದರೂ ಮಕ್ಕಳ ಹಿತದೃಷ್ಟಿಯಿಂದ ಕೆಲವು ನಿಯಮಗಳಿವೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here