
ಮಂಗಳೂರು: ಈಗಾಗಲೇ ಬಿಡುಗಡೆಗೊಂಡಿರುವ ಈ ವರ್ಷದ ಮೊದಲ ಸೂಪರ್ ಹಿಟ್ ಬಿಗ್ ಬಜೆಟ್ ಕಾಮಿಡಿ ಫ್ಯಾಮಿಲಿ ಎಂಟರ್ಟೈನರ್ ತುಳು ಚಿತ್ರ ಮಿಡಲ್ ಕ್ಲಾಸ್ ಫ್ಯಾಮಿಲಿ ಇದೇ ಬರುವ ಆದಿತ್ಯವಾರ ಫೆಬ್ರವರಿ 23 ರಂದು ಯಶಸ್ವಿ ಇಪ್ಪತ್ತ ಐದು ದಿನಗಳನ್ನು ಪೂರೈಸುತ್ತಿದ್ದು.



ಈ ಸಂಭ್ರಮಾಚರಣೆಯನ್ನು ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಬೆಳಿಗ್ಗೆ 09:45 ರ ಪ್ರದರ್ಶನ,ಸುರತ್ಕಲ್ ನ ನಟರಾಜ ಚಿತ್ರಮಂದಿರದಲ್ಲಿ ಮಧ್ಯಾಹ್ನ 02:00 ಗಂಟೆಯ ಪ್ರದರ್ಶನ ಹಾಗೂ ಮಂಗಳೂರಿನ ರೂಪವಾಣಿ ಚಿತ್ರಮಂದಿರದಲ್ಲಿ 03:30 ರ ಪ್ರದರ್ಶನ ಸಂಪೂರ್ಣವಾಗಿ ಉಚಿತವಾಗಿ ನೀಡುವುದರ ಮೂಲಕ ಚಿತ್ರ ತಂಡ ಸಂಭ್ರಮಿಸಲಿದೆ.


ಮಿಡಲ್ ಕ್ಲಾಸ್ ಫ್ಯಾಮಿಲಿ ತುಳು ಚಲನಚಿತ್ರ ಈಗಾಗಲೇ ಪ್ರೇಕ್ಷಕರ ಮನಸನ್ನು ಗೆದ್ದಿದ್ದು ಬಹುತೇಕ ಹೌಸ್ ಫುಲ್ ಪ್ರದರ್ಶನ ನೀಡುತ್ತಿದೆ.
ಹಾಸ್ಯದೊಂದಿಗೆ ಉತ್ತಮ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಆಗಿದ್ದು ನೂರು ದಿನದ ಪ್ರದರ್ಶನ ಪೂರೈಸುವುದು ಪಕ್ಕಾ ಎಂದು ಚಿತ್ರಾಭಿಮಾನಿಗಳು ನುಡಿದಿದ್ದಾರೆ.