
ತಿರುವನಂತಪುರಂ: ಕೇರಳದ ಕೊಯಿಲಾಂಡಿ ಬಳಿಯ ಮನಕುಲಂಗರ ದೇವಾಲಯದಲ್ಲಿ ಗುರುವಾರ ಸಂಜೆ ನಡೆದ ಉತ್ಸವ ಸಂದರ್ಭದಲ್ಲಿ ಆನೆ ದಾಳಿಯಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಮೂರು ವೃದ್ಧರು ಸಾವನ್ನಪ್ಪಿದ್ದಾರೆ.



ದೇವಾಲಯದಲ್ಲಿ ಉತ್ಸವದ ಅಂಗವಾಗಿ ಆನೆಗಳನ್ನು ಕರೆತರಲಾಗಿದ್ದು, ಪಟಾಕಿ ಸಿಡಿಸಿದಾಗ ಎರಡು ಆನೆಗಳು ಆತಂಕಕ್ಕೊಳಗಾಗಿ ಅಡ್ಡದಿಡ್ಡಿ ಓಡಾಡಲು ಆರಂಭಿಸಿವೆ. ಈ ವೇಳೆ ದೇವಾಲಯದ ಕಟ್ಟಡಕ್ಕೆ ಆನೆಗಳು ಡಿಕ್ಕಿ ಹೊಡೆದ ಪರಿಣಾಮ ಗೋಡೆಯೊಂದು ಕುಸಿದುಬಿದ್ದಿದೆ. ಗೋಡೆಯ ಕೆಳಗೆ ಸಿಲುಕಿದ ಮೂರು ಜನರು ಸಾವನ್ನಪ್ಪಿದ್ದಾರೆ.


ಮೃತರಾದವರು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರಾಗಿದ್ದಾರೆ. ಇನ್ನು ಸುಮಾರು 20 ಜನರಿಗೆ ಸಣ್ಣಪುಟ್ಟ ಗಾಯಗಳು ಆಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ.