Home ಕರಾವಳಿ ಮಂಗಳೂರು: ಮುತ್ತೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆ

ಮಂಗಳೂರು: ಮುತ್ತೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆ

0

ಮುತ್ತೂರು ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಇಂದು ಶ್ರೀ ನಾರಾಯಣ ಗುರು ಸಭಾ ಭವನ ಕೊಳವೂರು ಇಲ್ಲಿ ನಡೆಯಿತು . ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ವಹಿಸಿದರು .ನೋಡೆಲ್ ಅಧಿಕಾರಿ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ದಯಾನಂದ ಶೆಟ್ಟಿ ಇವರು ಸಭೆ ನಡೆಸಿಕೊಟ್ಟರು.

ವಿವಿಧ ಇಲಾಖಾ ಅಧಿಕಾರಿಗಳು ಇಲಾಖಾ ಮಾಹಿತಿಯನ್ನು ನೀಡಿದರು . ಆರೋಗ್ಯ ಇಲಾಖೆ ಸಹಾಯಕಿ ಶಬ್ನಮ್ ತಮ್ಮ ಇಲಾಖಾ ಮಾಹಿತಿ ನೀಡಿದರು . ಬಜ್ಪೆ ಪೊಲೀಸ್ ಇಲಾಖೆ ಕೆಂಚಪ್ಪ ಮಾತನಾಡಿ ಸೈಬರ್ ಅಪರಾಧದ ಬಗ್ಗೆ ಜಾಗ್ರತೆ ವಹಿಸಬೇಕೆಂದು ಗ್ರಾಮಸ್ಥರಿಗೆ ಮನವಿ ಮಾಡಿದರು . ಸಹಾಯಕ ತೋಟಗಾರಿಕಾ ಇಲಾಖೆ ಅಧಿಕಾರಿ ಮಹೇಶ್ ಇವರು ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಹನಿ ಮತ್ತು ತುಂತುರು ನೀರಾವರಿ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.

ಪಶು ಸಂಗೋಪಣಾ ಇಲಾಖೆ ಅಧಿಕಾರಿ ಕೆ.ಜಿ ಮನೋಹರ್ ಇವರು ತಮ್ಮ ಇಲಾಖಾ ಮಾಹಿತಿ ನೀಡಿದರು . ಮಕ್ಕಳ ಮತ್ತು ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ಅಶ್ವಿನಿ ಎಂ .ಕೆ ಇವರು ತಮ್ಮ ಇಲಾಖಾ ಮಾಹಿತಿ ನೀಡಿದರು , ಅಂಗವಾಡಿಗಳಿಗೆ ಯಾವುದೇ ಸಮಸ್ಯೆ ಕುಂದು ಕೊರತೆಗಳಿದ್ದಲ್ಲಿ ಮುತ್ತೂರು ಪಂಚಾಯತ್ ಹಾಗೂ ಗ್ರಾಮಸ್ಥರು ಶೀಘ್ರವೇ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದರು ಆದರೆ ಹುಣ್ಸೆದಡಿ ಅಂಗನವಾಡಿ ಹೊಸ ಕಾರ್ಯಕರ್ತೆ ನೇಮಕ ಆಗಿದ್ದು ಇದರ ನೇಮಕಾತಿ ಪ್ರಕ್ರಿಯೆ ಹಾಗೂ ನೇಮಕಾತಿ ಆಗಿರುವುದು ಪಂಚಾಯತ್ ಗಮನಕ್ಕೆ ತರದೆ ಇರುವುದನ್ನು ಪಂಚಾಯತ್ ಅಧ್ಯಕ್ಷರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಇದಕ್ಕೆ ಗ್ರಾಮಸ್ಥರು ಕೂಡ ಧ್ವನಿ ಗೂಡಿಸಿದರು , ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ಮೇಲ್ವಿಚಾರಕಿ ಅಶ್ವಿನಿ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಭಾಗ್ಯವತಿ , ಮೆಸ್ಕಾಂ ಇಲಾಖಾ ಅಧಿಕಾರಿ ವೀರಭದ್ರಪ್ಪ , ಕಂದಾಯ ನಿರೀಕ್ಷಕರಾದ ಪೂರ್ಣ ಚಂದ್ರ , ಪಂಚಾಯತ್ ರಾಜ್ ಇಂಜಿನಿಯರ್ ಲೋಯ್ಡ್ ರೊಡ್ರಿಗಸ್ , ಅರಣ್ಯ ಇಲಾಖಾಧಿಕಾರಿ ದಿನೇಶ್ ಕುಮಾರ್ , ಕೆಪಿಎಸ್ ಶಾಲೆ ಮುತ್ತೂರು ಇಲ್ಲಿನ ಅದ್ಯಾಪಕರ ಬಾಲಕೃಷ್ಣ ನಾಯ್ಕ್ , ಸರಕಾರಿ ಉನ್ನತಿಕೃತ ಹಿರಿಯ ಪ್ರಾಥಮಿಕ ಶಾಲೆ ಬೊಳಿಯ ಇಲ್ಲಿನ ಅಧ್ಯಾಪಕರ ಶಂಕರ್ ಶೆಟ್ಟಿ , ಪಂಚಾಯತ್ ಉಪಾಧ್ಯಕ್ಷರಾದ ಸುಶ್ಮಾ ಸಂತೋಷ್ , ಸದಸ್ಯರುಗಳಾದ ಪುಷ್ಪಾ ನಾಯ್ಕ್ , ಸತೀಶ್ ಪೂಜಾರಿ ಬಳ್ಳಾಜೆ , ಜಗದೀಶ್ ದುರ್ಗಾಕೊಡಿ , ಮಾಲತಿ , ಶಶಿಕಲಾ , ತೋಮಸ್ ಹೆರಾಲ್ಡ್ ರೋಸರಿಯೋ , ತಾರನಾಥ್ ಕುಲಾಲ್ , ರುಕ್ಮಿಣಿ ಉಪಸ್ಥಿತರಿದ್ದರು . ಕೊಳವೂರು ಗ್ರಾಮದ ಬಳ್ಳಾಜೆ ಗುಂಡಿಮಾರ್ ಎಂಬಲ್ಲಿ ಅವೈಜ್ಞಾನಿಕವಾಗಿ ಸಾಕುತ್ತಿರುವ ಹಂದಿಯಿಂದ ತೀರ್ವವಾಗಿ ತೊಂದರೆಯಾಗಿರುತ್ತದೆ ಅದನ್ನು ಆದಷ್ಟು ಬೇಗ ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು . ಗುಂಡಿಮಾರ್ ಬಳಿ ಪಂಚಾಯತ್ ನಿವೇಶಕ್ಕೆಂದು ಕಾದಿರಿಸಿದ ಸರ್ವೇ ನಂಬರ್ 35 ರ ಸ್ಥಳವನ್ನು ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಕಾರಣಕ್ಕೂ ಪಂಚಾಯತ್ ಕಾದಿರಿಸಿದ ಸ್ಥಳವನ್ನು ಯಾರಿಗೂ ನೀಡಬಾರದೆಂದು ಗ್ರಾಮಸ್ಥರು ಆಗ್ರಹಿಸಿದರು ಇದಕ್ಕೆ ಉತ್ತರಿಸಿದ ಕಂದಾಯ ನಿರೀಕ್ಷಕರು ಪಂಚಾಯತ್ ನಿವೇಶನಕ್ಕೆ ಕಾದಿರಿಸಿದ ಸ್ಥಳವನ್ನು ಅತಿಕ್ರಮಣ ಮಾಡಲು ಬಿಡುವುದಿಲ್ಲ ಇದರ ಬಗ್ಗೆ ಇಲಾಖೆಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು . ಕೊಳವೂರು ಗ್ರಾಮದ ವ್ಯಾಪ್ತಿಯಲ್ಲಿ ಉಡುಪಿ ,ಕಾಸರಗೋಡು 400 ಕೆವಿ ವಿದ್ಯುತ್ ತಂತಿ ಹಾದು ಹೋಗುವ ಬಗ್ಗೆ ಅಧಿಕಾರಿಗಳು ಸರ್ವೇ ಮಾಡದೆ ಕೃಷಿಕರಿಗೆ ಸರಿಯಾದ ಪರಿಹಾರ ನೀಡದೆ ಕೆಲಸ ಪ್ರಾರಂಭ ಮಾಡಿರುವುದರ ಬಗ್ಗೆ ಕೃಷಿಕರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು , ಇದಕ್ಕೆ ಉತ್ತರಿಸಿದಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ಇದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ವಿದ್ಯುತ್ ತಂತಿ ಕಂಬ ಹಾಕುವ ಮೊದಲು ಅಲ್ಲಿನ ಸಂಬಂಧಪಟ್ಟ ಕೃಷಿಕರ ಸಭೆ ಕರೆದು ಜಾಗವನ್ನು ಸರ್ವೆ ಮಾಡಿ ರೈತರಿಗೆ ಪರಿಹಾರ ನೀಡಿ ಕಾಮಗಾರಿ ನಡೆಸಬೇಕು ಎಂದು ನಿರ್ಣಯ ಮಾಡಿ ಮೇಲಧಿಕಾರಿಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲಾಗುವುದು ಎಂದರು . ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಮುತ್ತೂರು ತೂಗುಸೇತುವೆಯನ್ನು ಶೀಘ್ರವೇ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಒತ್ತತಿಸಿದರು , ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಪಂಚಾಯತ್ ನಲ್ಲಿ ಅನುದಾನ ಕಡಿಮೆ ಇರುವುದರಿಂದ ಇದರ ಬಗ್ಗೆ ಉಸ್ತುವಾರಿ ಸಚಿವರಿಗೆ ಹಾಗೂ ಶಾಸಕರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುತ್ತೇವೆ ಎಂದರು. ನೋಡೆಲ್ ಅಧಿಕಾರಿ ದಯಾನಂದ ಶೆಟ್ಟಿ ಇವರು ಮಾತನಾಡಿ ಈ ಗ್ರಾಮ ಪಂಚಾಯತ್ ಗೆ ನಾನು ಮೊದಲನೇ ಬಾರಿ ನೋಡೆಲ್ ಅಧಿಕಾರಿಯಾಗಿ ಬಂದಿದ್ದು ಇಲ್ಲಿನ ಗ್ರಾಮಸ್ಥರ ಶಿಸ್ತು ಹಾಗೂ ಆರೋಗ್ಯಕರವಾದ ಚರ್ಚೆಯನ್ನು ನೋಡಿ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಪಂಚಾಯತ್ ಅಧಿಕಾರಿ ವರ್ಗ , ಆಡಳಿತ ಮಂಡಳಿ ಹಾಗೂ ಎಲ್ಲಾ ಗ್ರಾಮಸ್ಥರನ್ನು ಶ್ಲಾಘಿಸಿದರು . ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಎಸ್ ನಾಯ್ಕ್ ಇವರು ಸ್ವಾಗತಿಸಿ ವಂದನಾರ್ಪಣೆ ಗೈದರು . ಕಾರ್ಯದರ್ಶಿ ವಸಂತಿ ಹಾಗೂ ಪಂಚಾಯತ್ ಸಿಬ್ಬಂದಿಗಳು ಜತೆಗಿದ್ದರು . ಈ ಸಂಧರ್ಭದಲ್ಲಿ ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು , ಸಂಜೀವಿನಿ ಒಕ್ಕೂಟ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here