
ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಬೊಳಿಯಾರ್ ಫಾರ್ಮ್ಸ್ ನ ಜಾಗದ ವಿವಾದಕ್ಕೆ ಸಂಬಂಧಿಸಿದ ಕಳೆದ ವರ್ಷ ನಡೆದ ವಾಮಾಚಾರದ ಪ್ರಕರಣವು ಭಾರಿ ಸದ್ದು ಮಾಡಿದ್ದು ಈಗ ಜಾಗದ ವ್ಯಾಜ್ಯವು ರಾಜ್ಯ ಹೈ ಕೋರ್ಟ್ ನಲ್ಲಿ ನಡೆಯುತ್ತಿದೆ.



ಈ ಜಾಗವನ್ನು ಮಂಗಳೂರಿನ ಉದ್ಯಮಿಯೊಬ್ಬರ ಪತ್ನಿ ಖರೀದಿಸಿ ತಮ್ಮ ಹೆಸರಿಗೆ ನೋಂದಾವಣೆ ಮಾಡಿದ ನಂತರ ಜಾಗದ ಮೊದಲ ಮಾಲಿಕ ಸ್ಥಳೀಯ ರಾಜಕೀಯ ನಾಯಕರು, ಅಕ್ರಮ ಮರಳು ವ್ಯಾಪಾರದ ಉದ್ಯಮಿಗಳು ಹಾಗೂ ಕೆಲವು ಭೂ ಮಾಫಿಯಾದ ಪುಂಡ ಪೋಕರಿಗಳೊಂದಿಗೆ ಸೇರಿ ಮತ್ತೆ ಹಣ ಲಪಟಾಯಿಸುವ ನೆಪದಲ್ಲಿ ಜಾಗಕ್ಕೆ ಕೋರ್ಟಿನಿಂದ ಯಥಾಸ್ಥಿತಿ ಕಾಪಾಡುವಂತೆ ಆದೇಶ ತಂದಿದ್ದರು.


ಅಲ್ಲಿಂದ ಶುರು ಆಯಿತು ನೋಡಿ ಇವರೆಲ್ಲರಿಗೂ ಒಂದೊಂದೇ ಸಮಸ್ಯೆಗಳು ಮೊದಲಿಗೆ ಈ ಪ್ರಕರಣದಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಶಾಸಕರೊಬ್ಬರು ಮರಣ ಹೊಂದಿದರು , ಹಾಲಿ ಶಾಸಕರ ಮೇಲೆ ಒಂದು ಪ್ರಕರಣ ದಾಖಲಾಗಿ ಸ್ಟೇಷನ್ ಮೆಟ್ಟಿಲು ಏರಬೇಕಾಗಿ ಬಂತು.
ಅಷ್ಟರಲ್ಲಿ ಮತ್ತೆ ಈ ಗ್ಯಾಂಗ್ ಹಿಡಿದಿದ್ದು ವಾಮಾಚಾರದ ಮಾರ್ಗ (ಆಡಿನ ತಲೆಗಳ) ಆ ವಿಷಯ ಎಲ್ಲರಿಗೂ ತಿಳಿದಿದ್ದೇ ಬಿಡಿ.
ಇಷ್ಟೆಲ್ಲಾ ವಿಷಯಗಳು ತನ್ನ ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಜಾಗದ ದೈವವು ಸುಮ್ಮನೆ ಕುಳಿತುಕೊಂಡಿದೆಯೇ?? ಖಂಡಿತವಾಗಿಯೂ ಇಲ್ಲ ಒಂದೊಂದಾಗಿಯೇ ತನ್ನ ಕಾರ್ಣಿಕ ತೋರಿಸುತ್ತಿದೆ, ವಾಮಾಚಾರದ ಪರಿಣಾಮವು ಎಲ್ಲರಿಗೂ ಉಲ್ಟಾ ಹೊಡೆಯುತ್ತಿದೆ. ಲ್ಯಾಂಡ್ ಮಾಫಿಯಾ ಗ್ಯಾಂಗ್ ಸ್ಥಳೀಯವಾಗಿ ಅಕ್ರಮ ಮರಳು ಗಣಿಗಾರಿಕೆ ಮಾಡಿ ವ್ಯಾಪಾರ ನಡೆಸುತ್ತಿದ್ದ ಉದ್ಯಮಿಯ ಮೇಲೆ ಪ್ರಕರಣ ದಾಖಲಾಗಿ ಜೈಲೂಟ ಮಾಡುವ ಭಾಗ್ಯ ದೊರಕಿತು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯೆಯ ಪತಿಯ ಅಕಾಲಿಕ ಮರಣ, ಮಾಜಿ ಶಾಸಕರ ಬೆಂಬಲಿಗನ ಪುತ್ರ ಭೀಕರ ದ್ವಿಚಕ್ರ ವಾಹನ ಅಫಘಾತಕ್ಕೆ ಒಳಗಾಗಿ ಹಾಸಿಗೆ ಹಿಡಿದು ಮಲಗುವಂತೆ ಆಗಿದೆ, ಬೆಳ್ತಂಗಡಿ ತಾಲೂಕಿನ ಬಾರ್ ಹೋಟೆಲ್ ಉದ್ಯಮಿಯ ಸಹೋದರನಿಗೂ ಕೂಡ ಆರೋಗ್ಯದಲ್ಲಿ ಏರು ಪೇರು ಆತನ ವ್ಯವಹಾರವು ನೆಲಕಚ್ಚಿದೆ,ಮುಖ್ಯವಾಗಿ ಇದರಲ್ಲಿ ಭಾಗಿಯಾಗಿದ್ದ ಮುಸ್ಲಿಂ ವ್ಯಕ್ತಿಯಂತೂ ದಿಕ್ಕಾಪಾಲಾಗಿದ್ದಾನೆ.
ಇದು ಇಷ್ಟಕ್ಕೇ ನಿಲ್ಲಲಿಲ್ಲ ಜಾಗದಲ್ಲಿರುವ ರಬ್ಬರ್ ತೋಟದ ಟ್ಯಾಪಿಂಗ್ ಕಾಂಟ್ರಾಕ್ಟ್ ಪಡೆದು ಕೆಲಸದ ಜನರನ್ನು ನೇಮಿಸಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೂ ಮೊನ್ನೆಯಷ್ಟೇ ಭೀಕರ ಅಪಘಾತದಲ್ಲಿ ಸ್ಪಾಟ್ ಔಟ್ ಆಗಿದ್ದು ಇದನೆಲ್ಲ ಕಣ್ಣಾರೆ ನೋಡುತ್ತಿರುವ ಜನರು ಅಲ್ಲಿನ ತೋಟದ ಕೆಲಸಕ್ಕೆ ಹೋಗಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ವಾಮಾಚಾರದ ಘಟನೆ ನಡೆದ ಒಂದು ವರ್ಷದ ಒಳಗೇ ಇಷ್ಟೆಲ್ಲಾ ಘಟನೆಗಳು ನಡೆದಿದ್ದು ಮುಂದೆ ಈ ಭೂ ಮಾಫಿಯಾ ಗ್ಯಾಂಗ್ ನ ವ್ಯಕ್ತಿಗಳಲ್ಲಿ ಯಾರಿಗೆ ಏನು ಕಾದಿದೆಯೋ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಒಟ್ಟಾರೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಬೊಳಿಯಾರ್ ಫಾರ್ಮ್ಸ್ ನ ಜಾಗದ ವಿವಾದ ಸೃಷ್ಟಿಸಿದ ಪ್ರತಿಯೊಬ್ಬರ ಮೇಲೆ ಕೂಡ ದುಷ್ಪರಿಣಾಮಗಳು ಬೀರುತ್ತಿದ್ದು ಅನ್ಯಾಯ ಎಸಗಿದವರನ್ನು ನ್ಯಾಯಾಂಗವು ಬಿಟ್ಟರೂ ಇದನ್ನೆಲ್ಲ ಕಣ್ಣಾರೆ ನೋಡುತ್ತಿರುವ ದೈವವು ಬಿಡುವುದಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.