
ಅನ್ಯ ಜಾತಿ ಯುವಕನನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿದ ಮಗಳನ್ನು ಕೊಲೆ ಮಾಡಿ ತಂದೆ ಪರಾರಿಯಾಗಿದ್ದಾನೆ.



ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬರ್ಗೆನ ತಾಂಡಾದ ಯುವತಿ ಸೋನಿ (18) ಎನ್ನುವ ಕೊಲೆಯಾಗಿದ್ದು, ಆಕೆಯನ್ನು ಕೊಲೆ ಮಾಡಿದ ತಂದೆ ಪರಶುರಾಮ ಪರಾರಿಯಾಗಿದ್ದಾನೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸಂತಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಸಿ ಪ್ರದೀಪ್ ಕುಂಟಿ, ಡಿವೈಎಸ್ಪಿ ಶಿವಾನಂದ ಪವರಶಟ್ಟ, ಸಿಪಿಐ ರಘುವೀರಸಿಂಗ್, ಪಿಎಸ್ಐ ನಂದಕುಮಾರ ಮೂಳೆ ಭೇಟಿ ನೀಡಿ ಮುಂದಿನ ತನಿಖೆ ನಡೆಸಿದ್ದಾರೆ


ಪ್ರೀತಿ-ಪ್ರೇಮದಿಂದ ದೂರವಿರುವಂತೆ ಮಗಳಿಗೆ ಅನೇಕ ಬಾರಿ ತಂದೆ ತಿಳುವಳಿಕೆ ಹೇಳಿದ್ದ. ನಿನಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡುತ್ತೇನೆ ಎಂದಿದ್ದನಂತೆ.ಅದೇ ವೇಳೆ ತಂದೆಯ ಎದುರು ತನ್ನ ಪ್ರೀತಿ ವಿಷಯವನ್ನು ಮಗಳು ಪ್ರಸ್ತಾಪಿಸಿದ್ದಾಳೆ. ಪ್ರೀತಿಸಿದ ಯುವಕನನ್ನೇ ಮದುವೆ ಆಗುತ್ತೇನೆ ಎಂದಿದ್ದಾಳಂತೆ. ಅದಕ್ಕೆ ಕೋಪಿಸಿಕೊಂಡ ಅಪ್ಪ ಮೋತಿರಾಮ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕುತ್ತಿಗೆಗೆ ಹಗ್ಗ ಬಿಗಿದಿದ್ದಾನೆ. ನಂತರ ಕಟ್ಟಿಗೆಯಿಂದ ಮಾರಾಣಾಂತಿಕ ಹಲ್ಲೆ ನಡೆಸಿದ್ದಾನೆ. ಮೋನಿಕಾ ಜಾಧವ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಉಸಿರು ಬಿಟ್ಟಿದ್ದಾಳೆ.