Home ತಾಜಾ ಸುದ್ದಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮಾಜಿ `CM ಅರವಿಂದ್ ಕೇಜ್ರಿವಾಲ್’ ಗೆ ಸೋಲು

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮಾಜಿ `CM ಅರವಿಂದ್ ಕೇಜ್ರಿವಾಲ್’ ಗೆ ಸೋಲು

0

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಒಂದರ ನಂತರ ಒಂದರಂತೆ ಹಿನ್ನಡೆಯನ್ನು ಎದುರಿಸುತ್ತಿದೆ. ಪಕ್ಷದ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರವಾಲ್ 3182 ಮತಗಳಿಂದ ಹೀನಾಯವಾಗಿ ಸೋತಿದ್ದಾರೆ.

ನವದೆಹಲಿ ಕ್ಷೇತ್ರದಿಂದ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಅವರಿಗೆ ಸೋಲಾಗಿದೆ. ಇದು ಎಎಪಿಗೆ ಅರಗಿಸಿಕೊಳ್ಳಲಾರದ ತುತ್ತಾಗಿ ಪರಿಣಮಿಸಿದೆ. ಅಬಕಾರಿ ಹಗರಣ ಹಾಗೂ ಭ್ರಷ್ಟಾಚಾರ ಆರೋಪಗಳು ಕೇಜ್ರಿವಾಲ್ ಸೋಲಿಗೆ ಪ್ರಮುಖ ಕಾರಣಗಳು ಎನ್ನಲಾಗುತ್ತಿದೆ.

ಆಮ್ ಆದ್ಮಿ ಪಕ್ಷದ ವರಿಷ್ಠ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್​ಗೆ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ. ಇದರೊಂದಿಗೆ ಆಡಳಿತಾರೂಢ ಎಎಪಿಗೆ ಹಾಗೂ ಕೇಜ್ರಿವಾಲ್​ಗೆ ಭಾರೀ ಮುಖಭಂಗವಾದಂತಾಗಿದೆ. ಸತತ ಎರಡು ಬಾರಿ ದೆಹಲಿಯ ಗದ್ದುಗೆ ಏರಿದ್ದ ಎಎಪಿ ಮತ್ತು ಕೇಜ್ರಿವಾಲ್​ಗೆ ಈ ಬಾರಿ ಅಬಕಾರಿ ನೀತಿ ಹಗರಣದಿಂದ ಭಾರಿ ಹಿನ್ನಡೆಯಾಗಿತ್ತು. ಅದು ಮತದಾನದ ಮೇಲೂ ಪರಿಣಾಮ ಬೀರಿದಂತಿದೆ.

LEAVE A REPLY

Please enter your comment!
Please enter your name here