Home ಕರಾವಳಿ ಮಂಗಳೂರು: ಅಕ್ರಮ ಮರದ ದಾಸ್ತಾನು ಪತ್ತೆ- ಪ್ರಕರಣ ದಾಖಲು

ಮಂಗಳೂರು: ಅಕ್ರಮ ಮರದ ದಾಸ್ತಾನು ಪತ್ತೆ- ಪ್ರಕರಣ ದಾಖಲು

0

ಮಂಗಳೂರು: ನಗರದ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯ ರಸ್ತೆಯಲ್ಲಿ ಫೆಬ್ರವರಿ 7 ರಂದು ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಕೆಎ-02ಎಸಿ 5994 ನೊಂದಣೆ ಸಂಖ್ಯೆಯ ವಾಹನದಲ್ಲಿದ್ದ ವಿವಿದ ಜಾತಿಯ 26 ದಿಮ್ಮಿಗಳನ್ನು ಸೇರಿ ಒಟ್ಟು 6 ಲಕ್ಷ ಬೆಲೆಬಾಳುವ ಸೊತ್ತುಗಳನ್ನು ಸರಕಾರದ ಪರ ಅಮಾನತು ಪಡಿಸಿ, ಕುಂದಾಪುರ ತಾಲೂಕಿನ ಮೊಹಮ್ಮದ್ ಸಿರಾಜ್ ಎಂಬವರ ವಿರುದ್ಧ ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಪತ್ತೆಹಚ್ಚಿ ಅರಣ್ಯ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್, ವಲಯ ಅರಣ್ಯ ಅಧಿಕಾರಿ(ಪ್ರಭಾರ) ಪ್ರಶಾಂತ್, ಉಪ ವಲಯ ಅರಣ್ಯ ಅಧಿಕಾರಿ ಶಿವಾನಂದ ಸದೇಪ ಮಾದರ, ಉಪ ವಲಯ ಅರಣ್ಯ ಅಧಿಕಾರಿ ವಿನಯ ಕುಮಾರ್, ವಾಹನ ಚಾಲಕರು ಜಯಪ್ರಕಾಶ್ ಕೆ, ಮತ್ತು ಜಯಪ್ರಕಾಶ್ ಭಾಗವಹಿಸಿದ್ದರು.

ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಾಂತ್ ಎಂ.ಖಣದಾಳಿ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಪ್ರಭಾರ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಇವರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here