![](https://i0.wp.com/prakharanews.com/wp-content/uploads/2025/01/WhatsApp-Image-2025-01-21-at-12.33.45-PM-scaled.jpeg?fit=2048%2C2560&ssl=1)
ನವದೆಹಲಿ: ಬಹುನಿರೀಕ್ಷೆಯ ಕೇಂದ್ರ ಸರ್ಕಾರದ 2025-2026ನೇ ಸಾಲಿನ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ.
![](https://i0.wp.com/prakharanews.com/wp-content/uploads/2025/01/WhatsApp-Image-2025-01-22-at-5.17.51-PM.jpeg?fit=1157%2C1600&ssl=1)
![](https://i0.wp.com/prakharanews.com/wp-content/uploads/2025/01/WhatsApp-Image-2025-01-23-at-5.27.18-PM.jpeg?fit=681%2C706&ssl=1)
![](https://i0.wp.com/prakharanews.com/wp-content/uploads/2025/01/girija-1.jpg?fit=1158%2C1756&ssl=1)
ಇಂದು ಬೆಳಗ್ಗೆ 11ಗಂಟೆಗೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಮಧ್ಯಮ ವರ್ಗದ ಜನರ ಮೇಲಿನ ತೆರಿಗೆ ಭಾರ ಇಳಿಸುವ ಹಾಗೂ ಮಂದಗತಿಯ ಆರ್ಥಿಕತೆಗೆ ವೇಗ ನೀಡುವ ಜಟಿಲ ಸವಾಲಿನ ನಡುವೆಯೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಿ ಚಾರಿತ್ರಿಕ ದಾಖಲೆ ಬರೆಯಲು ಅಣಿಯಾಗಿದ್ದಾರೆ. ಸದ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.
![](https://i0.wp.com/prakharanews.com/wp-content/uploads/2025/01/IMG-20241214-WA0021-scaled.jpg?fit=1810%2C2560&ssl=1)
ಮತ್ತೊಂದೆಡೆ ಜಿಎಸ್ಟಿ ಏರಿಕೆಯಿಂದ ಮಧ್ಯಮ ವರ್ಗ ಬಸವಳಿದಿದೆ. ಹಾಗಾಗಿ, ಈ ಬಾರಿಯಾದರೂ ನಿರ್ಮಲಾ ಅವರು ಆದಾಯ ತೆರಿಗೆಯ ಹೊರೆ ಇಳಿಸಲಿದ್ದಾರೆಯೇ ಎಂದು ವೈಯಕ್ತಿಕ ತೆರಿಗೆದಾರರು ಬಜೆಟ್ನತ್ತ ಕುತೂಹಲ ನೆಟ್ಟಿದ್ದಾರೆ.
ಆಸ್ತಿ ತೆರಿಗೆ ವಿಚಾರದಲ್ಲಿ ಸಾಕಷ್ಟು ಬದಲಾವಣೆ ಆಗಬಹುದು ಎಂದು ಹೇಳಲಾಗುತ್ತಿದೆ. ತೆರಿಗೆ ಸ್ಲಾಬ್ ಗಳಲ್ಲಿ ಹೊಸ ನಿಯಮ ಜಾರಿ, ಆದಾಯ ತೆರಿಗೆ ವಿನಾಯಿತಿ, ಶೇಕಡಾ 30ರಷ್ಟು ತೆರಿಗೆ ಸ್ಲಾಬ್ ಆದಾಯ ಮಿತಿ 15 ರಿಂದ 20 ಲಕ್ಷಕ್ಕೆ ಏರಿಕೆ ಸಾಧ್ಯತೆ, ಗೃಹ ಸಾಲಗಳಿಗೆ ತೆರಿಗೆ ವಿನಾಯಿತಿ, ಮಹಿಳೆ ಮತ್ತು ವಿದ್ಯಾರ್ಥಿಗಳ ಪರ ಹೊಸ ಯೋಜನೆ ಘೋಷಣೆ ಆಗಬಹುದು ಎನ್ನಲಾಗಿದೆ.