ಉಡುಪಿ: ನ್ಯಾನೋ ಗಣೇಶ ಖ್ಯಾತಿಯ ಗಿನ್ನಸ್ ಧಾಖಲೆ ವಿಜೇತ ಯುವ ಕಲಾ ಸಾಧಕ ಸಂಜಯ್ ದಯಾನಂದ ಕಾಡೂರು ಹೊಸ ದಾಖಲೆ ನಿರ್ಮಿಸಿ 4ನೇ ವಿಶ್ವ ದಾಖಲೆ ಮುಡಿಗೆರಿಸಿಕೊಂಡಿದ್ದಾರೆ. 2010 ರಲ್ಲಿ ಪೆನ್ಸಿಲ್ ಲೆಡ್ ನಲ್ಲಿ ಗಣೇಶನ ವಿಗ್ರಹ ರಚಿಸಿ ಸಾಧನೆಗೈದ ಸಂಜಯ್ ಇಲ್ಲಿವರೆಗೆ 3 ವಿಶ್ವದಾಖಲೆ 8ರಾಷ್ಟ್ರ ಪ್ರಶಸ್ತಿ 3 ಅಂತಾರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ 250 ಕ್ಕೂ ಹೆಚ್ಚು ಸನ್ಮಾನಗಳನ್ನು ಪಡೆದಿದ್ದಾರೆ tulu ಜಾನಪದ ಅಧ್ಯಯನಕ್ಕಾಗಿ ಹಾಂಗ್ ಕಾಂಗ್ ಜಾನಪದ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದಿದ್ದಾರೆ 2025ರ ಪದ್ಮಶ್ರೀ ಪ್ರಶಸ್ತಿಗೂ ನಮನಿರ್ದೇಶನ ಗೊಂಡಿದ್ದರು 2024 ಜನವರಿ 22 ರಂದು ನಡೆದ ಅಯೋಧ್ಯ ರಾಮ ಮಂದಿರ ಲೋಕಾರ್ಪಣೆ ಸಮಾರಂಭಕ್ಕೆ 7000 ವಿಶೇಷ ಆಹ್ವಾನಿತರಲ್ಲಿ ಒಬ್ಬರಾಗಿ ಉಡುಪಿಯನ್ನು ಪ್ರತಿನಿಧಿಸಿ ಭಾಗವಹಿಸಿದ್ದಾರೆ.
ಸಂಜಯ್ ಮೂಲತ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕಾಡೂರಿನ ಶ್ರೀ ರಾಮಪ್ಪ ಮೇಸ್ತ್ರಿ ಹಾಗೂ ಅಪ್ಪಿ ಪೂಜಾರ್ತಿ ರವರ ಮೊಮ್ಮಗ ಇವರ ತಂದೆ ಶ್ರೀಯುತ ದಯಾನಂದರವರು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ ಬಸ್ ಚಾಲಕರಾಗಿದ್ದಾರೆ ತಾಯಿ ಶ್ರೀಮತಿ ಸುನಿತಾ ಗೃಹಿಣಿ ಸಂಜಯ್ ರವರ ತಮ್ಮಂದಿರಾದ ಅಕ್ಷಯ್ ಪ್ರಣಯ ಇಬ್ಬರು ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದಾರೆ
2002ರಲ್ಲಿ ಮಂದಾರ್ತಿ ದುರ್ಗಾಪರಮೇಶ್ವರೀ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದ ಸಂದರ್ಭ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೇಂಟಿಂಗ್ ಮಾಡಿ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿ ಹೆಸರು ಮಾಡಿದ್ದ ಸಂಜಯ್ ಇದೀಗ 22 ವರ್ಷದ ನಂತರ 0.7 ಮಿಲಿಮೀಟರ್ ನ ಅತೀ ಚಿಕ್ಕ ಪೆನ್ಸಿಲ್ ಲೆಡ್ನಲ್ಲಿ ದುರ್ಗಾಪರಮೇಶ್ವರಿ ಅಮ್ಮನವರ ಮೂರ್ತಿ ಕೆತ್ತನೆ ಮಾಡಿದ್ದು ವಿಶ್ವದ ಅತೀ ಚಿಕ್ಕ ವಿಗ್ರಹ ಹಾಗೂ ವಿಶ್ವದ ಅತೀ ಸೂಕ್ಷ್ಮ ದುರ್ಗಾ ದೇವಿ ವಿಗ್ರಹವೆಂಬ ಹೆಗ್ಗಳಿಕೆಗೆ ಭಾಜನವಾಗಿದೆ.