ಮಂಗಳೂರು: ನರಿಂಗಾನ ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿರುವ ಹಿನ್ನೆಲೆಯಲ್ಲಿ ಕಂಬಳಾಭಿಮಾನಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಕಂಬಳ ಸಮಿತಿಯಿಂದ ಸಿಎಂ ಅವರಿಗೆ ಶನಿವಾರ ಅಹವಾಲು ಸಲ್ಲಿಸಲು ತೀರ್ಮಾನಿಸಲಾಗಿದೆ.
ಕಂಬಳಕ್ಕೆ ಸಹಾಯಧನ ಪ್ರಾಯೋಜಕತ್ವ ಶೀಘ್ರ ಬಿಡುಗಡೆ ಮಾಡಬೇಕು ಕ್ರೀಡಾ ಇಲಾಖೆ ಮಾನ್ಯತೆ ನೀಡುವಂತೆ ಶಿಫಾರಸು ಮಾಡಬೇಕು ಎಂದು ಕಂಬಳ ಸಮಿತಿ ಸಿಎಂ ಅವರಿಗೆ ಮನವಿ ಸಲ್ಲಿಸಲಿದೆ.