Home ಕರಾವಳಿ ಮಂಗಳೂರು: ಪೆಟ್ರೋಲ್ ಬಂಕ್ ನಲ್ಲಿ ವೈಯಕ್ತಿಕ ಖಾತೆಯ ಕ್ಯೂಆರ್ ಕೋಡ್ ಬಳಸಿ ಲಕ್ಷಾಂತರ ರೂಪಾಯಿ ವಂಚನೆ 

ಮಂಗಳೂರು: ಪೆಟ್ರೋಲ್ ಬಂಕ್ ನಲ್ಲಿ ವೈಯಕ್ತಿಕ ಖಾತೆಯ ಕ್ಯೂಆರ್ ಕೋಡ್ ಬಳಸಿ ಲಕ್ಷಾಂತರ ರೂಪಾಯಿ ವಂಚನೆ 

0

ಮಂಗಳೂರು: ಪೆಟ್ರೋಲ್ ಬಂಕ್ ಸೂಪರ್ ವೈಸರ್ ತನ್ನ ವೈಯಕ್ತಿಕ ಖಾತೆಯ ಕ್ಯೂಆರ್ ಕೋಡ್ ಬಳಸಿ ಬಂಕ್ ಗೆ 58.85 ಲಕ್ಷ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.

ಬಂಗ್ರಕೂಳೂರಿನ ರಿಲಯನ್ಸ್ ಪೆಟ್ರೋಲ್ ಬಂಕ್ ನಲ್ಲಿ ಸೂಪರ್ ವೈಸರ್ ಆಗಿದ್ದ ಆರೋಪಿ ಮೋಹನ್ ದಾಸ್ ಬಂಕ್ ನ ಹಣಕಾಸು ವ್ಯವಹಾರ ನಿರ್ವಹಣೆಯನ್ನು ನಡೆಸಿಕೊಂಡು ಸಂಪೂರ್ಣ ಜವಾಬ್ದಾರಿ ನೋಡಿಕೊಂಡಿದ್ದ ಈತ ಪೆಟ್ರೋಲ್ ಬಂಕ್ ನಲ್ಲಿ ಬಂಕ್ ನ ಕ್ಯೂಆರ್ ಕೋಡ್ ಬದಲಿಗೆ ತನ್ನ ವೈಯಕ್ತಿಕ ಖಾತೆಯ ಕ್ಯೂಆರ್ ಕೋಡ್ ಬಳಸಿ ಗ್ರಾಹಕರಿಗೆ ಬಂಕ್ ನದ್ದೇ ಕ್ಯೂಆರ್ ಕೋಡ್ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಕುರಿತು ನಗರದ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here