Home ಕರಾವಳಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲ್ಯೋಟ್ಟು ಅವಿರೋಧ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲ್ಯೋಟ್ಟು ಅವಿರೋಧ ಆಯ್ಕೆ

0

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾ‌ರ್ ರೈ ಬಾಲ್ಗೊಟ್ಟು ಅವಿರೋಧ ವಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ನೀಲಯ ಎಂ.ಅಗರಿ ಆಯ್ಕೆಯಾಗಿದ್ದಾರೆ.

ಯೂನಿಯನ್‌ನ ಕಚೇರಿಯಲ್ಲಿ ಸೋಮವಾರ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಉಪಸ್ಥಿತಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಶಶಿಕುಮಾ‌ರ್ ರೈ ಬಾಲ್ಯೂಟ್ಟು(ಪುತ್ತೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ) ಅವರನ್ನು ಮತ್ತು ಉಪಾಧ್ಯಕ್ಷರನ್ನಾಗಿ ನೀಲಯ ಎಂ.ಅಗರಿ(ಮಂಗಳೂರು ತಾಲೂಕಿನ ಮೂಡುಬಿದಿರೆ ಮತ್ತು ಮೂಲ್ಕಿ ಫಿರ್ಕಾ ಹೊರತುಪಡಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ) ಇವರನ್ನು ಆಯ್ಕೆ ಮಾಡಲಾಯಿತು. 

ಸಹಕಾರಿ ಯೂನಿಯನ್ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಎಲ್ಲರೂ ಅವಿರೋಧವಾಗಿ, ಆಯ್ಕೆಯಾಗಿದ್ದಾರೆ. ಮಂಗಳೂರು ತಾಲೂಕಿನ ಪ್ಯಾಕ್ಸ್ ಸಂಘಗಳ ಕ್ಷೇತ್ರದಿಂದ ನೀಲಯ ಎಂ.ಅಗರಿ, ಬಂಟ್ವಾಳ ಉ ತಾಲೂಕು ಪ್ಯಾಕ್ಸ್ ಸಹಕಾರ ಸಂಘಗಳ ಕ್ಷೇತ್ರದಿಂದ ಬಿ.ಪದ್ಮಶೇಖರ್ ಜೈನ್, ಪುತ್ತೂರು ತಾಲೂಕು ಪ್ಯಾಕ್ಸ್ ಸಹಕಾರ ಸಂಘಗಳ ಕ್ಷೇತ್ರದಿಂದ ಶಶಿಕುಮಾರ್ ರೈ ನಿ ಬಾಲ್ಯೂಟ್ಟು, ಸುಳ್ಯ ತಾಲೂಕು ಫ್ಯಾಕ್ಸ್ ಸಹಕಾರ ಮೂಡುಬಿದಿರೆ-ಮೂಲ್ಕಿ ಫಿರ್ಕಾ ಪ್ಯಾಕ್ಸ್ 2 ಸಹಕಾರ ಸಂಘಗಳ ಕ್ಷೇತ್ರದಿಂದ ಜೊಯ್ಸಸ್ ವಿಲ್ಪ್ರೆಡ್  ಡಿಸೋಜ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಸುಧಾಕರ ಪಿ.ಶೆಟ್ಟಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಹಕಾರಿ ಕ್ಷೇತ್ರದಿಂದ ಮಂಜುನಾಥ್ ಎನ್. ಎಸ್., ಮಹಿಳಾ ಸಹಕಾರಿ ಸಂಘಗಳ  ಸವಿತಾ ಎನ್.ಶೆಟ್ಟಿ, ಪಟ್ಟಣ ಸಹಕಾರಿ, ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರದಿಂದ ಡಾ. ಹರೀಶ್ ಆಚಾರ್ಯ, ಮೀನುಗಾರಿಕಾ  ಸಂಘಗಳು, ಕೈಗಾರಿಕಾ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಸಂಜೀವ ಪೂಜಾರಿ, ಜಿಲ್ಲೆಯ ಮಾರಾಟ ಸಂಘಗಳ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳ ಕ್ಷೇತ್ರದಿಂದ ಪ್ರವೀಣ್ ಗಿಲ್ಬರ್ಟ್‌ ಪಿಂಟೋ ಹಾಗೂ ಇತರ ಎಲ್ಲ ಸಹಕಾರ ಸಂಘಗಳ ಕ್ಷೇತ್ರದಿಂದ ಚಿತ್ತರಂಜನ್ ಬೋಳಾರ್ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರ ಚುಣಾವಣೆ ಸಂದರ್ಭ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್, ಎಸ್‌ಸಿಡಿಸಿಸಿ  ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ ಉಪಸ್ಥಿತರಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here