Home ಕರಾವಳಿ 2 ಮರಿಗಳಿಗೆ ಜನ್ಮ ನೀಡಿದ ಪಿಲಿಕುಲದ ಹುಲಿ ರಾಣಿ

2 ಮರಿಗಳಿಗೆ ಜನ್ಮ ನೀಡಿದ ಪಿಲಿಕುಲದ ಹುಲಿ ರಾಣಿ

0

ಮಂಗಳೂರು: ಪಿಲಿಕುಲ ಜೈವಿಕ ಉದ್ಯಾನವನದಲ್ಲಿ 14 ಹರೆಯದ “ರಾಣಿ” ಹೆಸರಿನ ಹುಲಿ ಡಿ.20ರಂದು ರಾತ್ರಿ ಎರಡು ಮರಿಗಳಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿದೆ.

ರಾಣಿಯು 2016ರಲ್ಲಿ ದಾಖಲೆ ಸಂಖ್ಯೆಯ ಐದು ಆರೋಗ್ಯವಂತ ಮರಿಗಳಿಗೆ ಹಾಗೂ 2021ರಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿತ್ತು.

“ರಾಣಿ” ಎಂಬ ಹುಲಿಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಮ ಮೂಲಕ ಬನ್ನೇರು ಘಟ್ಟದಿಂದ ತರಲಾಗಿದ್ದು, ಅಲ್ಲಿಗೆ ಇಲ್ಲಿಂದ ಒಂದು ಗಂಡು ಹುಲಿಯನ್ನು ನೀಡಲಾಗಿತ್ತು.

ಪ್ರಸ್ತುತ ಪಿಲಿಕುಲ ಮೃಗಾಲಯದಲ್ಲಿ ಹುಲಿಗಳ ಸಂಖ್ಯೆ 10ಕ್ಕೇರಿದೆ. ಈ ಪೈಕಿ 4 ಗಂಡು ಮತ್ತು 4 ಹೆಣ್ಣು ಹುಲಿಗಳಿವೆ. ಈಗ ಜನಿಸಿದ ಮರಿಗಳ ಲಿಂಗವನ್ನು ಎರಡು ತಿಂಗಳ ಬಳಿಕ ಗುರುತಿಸಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here