ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ದೇನೋಡಿಯ ಪ್ರಸಿದ್ದ ನಾಟಿ ವೈದ್ಯರಾದ ಶ್ರೀ ಉಮೇಶ್ ಪಂಡಿತ್ ರವರು ನಿಧನರಾಗಿದ್ದಾರೆ.
ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರು ಮಂಗಳೂರು ಶ್ರೀನಿವಾಸ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಳ್ತಂಗಡಿ, ಪುತ್ತೂರು, ಕಡಬ ತಾಲ್ಲೂಕಿನ ಪಟ್ಟಣಗಳಲ್ಲಿ ವಾರವಾರ ಶಿಬಿರ ನಡೆಸಿ ಹಳ್ಳಿ ಮದ್ದಿನ ಮುಖಾಂತರ ಅನೇಕ ಜನರ ಖಾಯಿಲೆಗಳನ್ನು ಗುಣಪಡಿಸಿ, ಅನೇಕ ಅಭಿಮಾನಿಗಳನ್ನು ಹೊಂದಿರುತ್ತಾರೆ. ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪತ್ತಿರುತ್ತಾರೆ.
ನಾಳೆ ಬೆಳಿಗ್ಗೆ 11ಗಂಟೆಯವರೆಗೆ ಶಿಶಿಲ ಸ್ವ ಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇವರು ಪತ್ನಿ ಮತ್ತು ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.