ಮಂಗಳೂರು: ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ, ‘ಲಯನ್ ಕಿಶೋರ್ ಡಿ. ಶೆಟ್ಟಿ’ ಇವರ ಸಲಹೆ ಸಹಕಾರದೊಂದಿಗೆ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ, ‘ತುಳುನಾಡ ಕಲಾಬಿರ್ಸೆ’ ದೀಪಕ್ ರೈ ಪಾಣಾಜೆ ಹಾಗೂ ‘ಮಂಗಳೂರು ಮೀನನಾಥ’ ರಾಘವೇಂದ್ರ ರೈ ಅಭಿನಯದಲ್ಲಿ “ರಂಗ್ ದ ರಾಜೆ” ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ “ಅಮ್ಮೆರ್” ತುಳು ನಾಟಕದ ನೂರರ ಸಂಭ್ರಮದ ನಾಟಕ ಪ್ರದರ್ಶನವು ನಿನ್ನೆ ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ಉದ್ಯಮಿ ಶ್ರೀ ಲಂಚುಲಾಲ್ ಕೆ. ಎಸ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ತುಳು ವಿದ್ವಾಂಸರಾದ ಕೆ.ಕೆ ಪೇಜಾವರ್, ಪಿಲಿಪಂಜ ತುಳು ಚಲನಚಿತ್ರದ ನಿರ್ಮಾಪಕರಾದ ಪ್ರತೀಕ್ ಪೂಜಾರಿ, ನಿರ್ದೇಶಕರಾದ ಭರತ್ ಶೆಟ್ಟಿ, ನಟರಾದ ರಮೇಶ್ ರೈ ಕುಕ್ಕುವಳ್ಳಿ, ಚೇತಕ್ ಪೂಜಾರಿ, ವಕೀಲರಾದ ನವೀನ್ ಶೆಟ್ಟಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.